ಭೋಪಾಲ್: ತನ್ನನ್ನು ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದಕ್ಕೆ ವಿವಾಹಿತನೊಬ್ಬ ಲಿವಿನ್ ಗೆಳತಿಯನ್ನು ಕೊಂದು ಸುಮಾರು 8 ತಿಂಗಳ ಕಾಲ ಶವವನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್ನಲ್ಲಿ ನಡೆದಿದೆ.ಆರೋಪಿಯನ್ನು ಸಂಜಯ್ ಪಾಟಿದಾರ್ ಹಾಗೂ ಕೊಲೆಯಾದ ಲಿವ್ ಇನ್ ಗೆಳತಿಯನ್ನ ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ.
ಪಾಟಿದಾರ್ ಬಾಡಿಗೆಗೆ ಪಡೆದಿದ್ದ ಮನೆಯ ಫ್ರಿಡ್ಜ್ನಲ್ಲಿ ಆಭರಣ ಧರಿಸಿ, ಸೀರೆಯುಟ್ಟ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಜೂನ್ ತಿಂಗಳಲ್ಲೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಜ್ಜಯಿನಿ ನಿವಾಸಿಯಾಗಿದ್ದ ಪಾಟಿದಾರ್ ಕಳೆದ 5 ವರ್ಷಗಳಿಂದ ಪಿಂಕಿಯೊಂದಿಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆದಿತ್ತು. ಇದರಿಂದ ಪಿಂಕಿ ಪದೇ ಪದೇ ತನ್ನನ್ನು ಮದುವೆಯಾಗುವಂತೆ ಪಾಟಿದಾರ್ಗೆ ಒತ್ತಡ ಹೇರುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಸಂಜಯ್ ತನ್ನ ಸ್ನೇಹಿತನೊಂದಿಗೆ ಸೇರಿ ಪಿಂಕಿ ಕೊಲ್ಲಲ್ಲು ಸ್ಕೆಚ್ ಹಾಕಿದ್ದ ಎಂದು ಮೂಲಗಳು ತಿಳಿಸಿವೆ.