ಕೊಲಂಬೊ: ಇನ್ನೊಂದೇ ವಾರದಲ್ಲಿ ಶ್ರೀಲಂಕಾ ಆತಿಥ್ಯದಲ್ಲಿ ಆರಂಭವಾಗಲಿರುವ ವನಿತಾ ಟಿ20 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ-ಪಾಕಿಸ್ಥಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಜು. 19ರ ಆರಂಭದ ದಿನದಂದೇ ರಾತ್ರಿ ಸಾಗಲಿದೆ. ಅಂದಿನ ಉದ್ಘಾಟನ ಪಂದ್ಯದಲ್ಲಿ ನೇಪಾಲ-ಯುಎಇ ಮುಖಾಮುಖೀ ಆಗಲಿವೆ.
ಆತಿಥೇಯ ಶ್ರೀಲಂಕಾ ಜು. 20ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ.ಭಾರತ `ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಪಾಕಿ ಸ್ಥಾನ, ಯುಎಇ ಮತ್ತು ನೇಪಾಲ ಉಳಿದ ತಂಡಗಳು. `ಬಿ’ ವಿಭಾಗದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳಿವೆ.10 ದಿನಗಳ ಕಾಲ ನಡೆಯುವ ಕೂಟದಲ್ಲಿ ಒಟ್ಟು 15 ಪಂದ್ಯಗಳನ್ನು ಆಡಲಾಗುವುದು. ಎಲ್ಲ ಪಂದ್ಯಗಳು ಡಂಬುಲದಲ್ಲಿ ನಡೆಯಲಿವೆ.
ವೀಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟನೆಯಲ್ಲಿ ತಿಳಿಸಿವೆ. ರವಿನ್ ವಿಕ್ರಮರತ್ನೆ ಈ ಪಂದ್ಯಾವಳಿಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.ಜು. 26ರಂದು ಎರಡೂ ಸೆಮಿಫೈನಲ್ ಹಾಗೂ ಜು. 28ರಂದು ಫೈನಲ್ ಪಂದ್ಯ ಸಾಗಲಿದೆ.
ಭಾರತದ ಲೀಗ್ ಪಂದ್ಯಗಳುದಿನಾಂಕ ಎದುರಾಳಿ ಸ್ಥಳ ಆರಂಭಜು. 19 ಪಾಕಿಸ್ಥಾನ ಡಂಬುಲ ರಾತ್ರಿ 7.00ಜು. 21 ಯುಎಇ ಡಂಬುಲ ಅ. 2.00 ಜು. 23 ನೇಪಾಲ ಡಂಬುಲ ರಾತ್ರಿ 7.00