ಕನಕಪುರ: ಕನಕಾಂಬರಿ ಮಹಿಳಾ ಒಕ್ಕೂಟದಿಂದ ಬ್ರಹತ್ ಮಹಿಳಾ ಜಾಗೃತಿ ಮಾಹ ಸಮಾವೇಶವನ್ನು ನ.24 ರಂದು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ತಿಳಿಸಿದರು.ನಗರದ ಕನಕ ಆಸ್ಪತ್ರೆ ರಸ್ತೆಯಲ್ಲಿರುವ ಕನಕಾಂಬರಿ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಕನಕಂಬರಿ ಮಹಿಳಾ ಒಕ್ಕೂಟ ಉತ್ತಮವಾಗಿ ನಡೆದುಕೊಂಡು ಬಂದಿದ್ದು ಆರ್ಥಿಕ ವಾಗಿಯೂ ಸದೃಡವಾಗಿದೆ,
7 ಸಾವಿರಕ್ಕೂ ಹೆಚ್ಚು ಸದಸ್ಯರನ್ನ ಹೊಂದಿರುವ ಕನಕಾಂಬರಿ ಮಹಿಳಾ ಒಕ್ಕೂಟ ದಿಂದ ಪ್ರತಿ 3 ವರ್ಷಗಳಿಗೊಮ್ಮೆ ಮಹಿಳೆಯರಿಗೆ ಜಾಗೃತಿ ಸಮಾವೇಶ ಮಾಡಿಕೊಂಡು ಬಂದಿದ್ದು ಕೋವಿಡ್ ಕಾರಣ ದಿಂದ ಕಳೆದ 5 ವರ್ಷಗಳಿಂದ ಸಮಾವೇಶ ನಡೆಸಲು ಸಾಧ್ಯವಾಗದೆ ಈ ವರ್ಷ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಮ್ಮ ಕನಕಾಂಬರಿ ಮಹಿಳಾ ಒಕ್ಕೂಟದಿಂದ ತಾಲೂಕಿ ನಲ್ಲಿ ನೂರಾರು ಕುಟುಂಬಗಳಿಗೆ ಅನುಕೂಲವಾಗಿದ್ದು ಜೀವನೋಪಾಯಕ್ಕೆ ವ್ಯಾಪಾರ, ಕೃಷಿ, ಉದ್ಯಮಕ್ಕಾಗಿ ಸುಮಾರು 15 ಕೋಟಿ ಯಷ್ಟು ಸಾಲವನ್ನು ಬ್ಯಾಂಕುಗಳ ಮೂಲಕ ಒಕ್ಕೂಟದ ಸದಸ್ಯರಿಗೆ ಕೊಡಿಸುತ್ತಾ ಬಂದಿದ್ದು ಒಕ್ಕೂಟದ ಗೌರವ ಅಧ್ಯಕ್ಷರಾಗಿರುವ ಎಚ್.ಕೆ.ಶ್ರೀಕಂಠು ಅವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಂಸ್ಥೆ ಯ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ ಮಾತನಾಡಿ ಗೌರವಾಧ್ಯಕ್ಷ ಶ್ರೀಕಂಠು ಅವರ ಜನ್ಮದಿನ ಅಂಗವಾಗಿ ಅವರ ಅಭಿಮಾನಿ ಬಳಗದವರು ವಿದ್ಯಾರ್ಥಿ ಗಳಿಗೆ 8 ಲಕ್ಷದಷ್ಟು ವಿದ್ಯಾರ್ಥಿ ವೇತನ, 7 ಲಕ್ಷ ವೆಚ್ಚದಲ್ಲಿ ನೂರು ಜನರಿಗೆ ಹೊಲಿಗೆ ಯಂತ್ರ, 2 ಲಕ್ಷ ವೆಚ್ಚದಲ್ಲಿ ಅಂಗವಿಕಲರಿಗೆ ಉಪಯೋಗವಾಗುವ ಸಲಕರಣೆಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದುಡಾ ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯ ವತಿ ಯಿಂದ ಡೆಂಟಲ್ ತಪಾಸಣೆ ಬಿಪಿ ಶುಗರ್ ತಪಾಸಣೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಿರಂಜನ್ ಅವರ ನೇತೃತ್ವದಲ್ಲಿ ಅನೀಮಿಯಾ ತಪಾಸಣೆ ಮತ್ತು ಚಿಕಿತ್ಸೆ, ವೈಷ್ಣವಿ ಲಯನ್ಸ್ ವತಿಯಿಂದ ನೇತ್ರ ತಪಾಸಣೆ ಮತ್ತು ಸ್ಥಳದಲ್ಲಿಯೇ ಕನ್ನಡಕ ವಿತರಣೆ ನಡೆಯಲಿದೆ ತಾಲ್ಲೂಕಿನ ಮಹಿಳೆಯರ ಶಕ್ತಿಯಾಗಿ ನಡೆಯುತ್ತಿರುವ ಈ ಮಹಿಳಾ ಜಾಗೃತಿ ಮಹಾಸಮಾವೇಶದಲ್ಲಿ ಒಕ್ಕೂಟದ ಸದಸ್ಯರ ಲ್ಲದೆ ತಾಲ್ಲೂಕಿನ ಮಹಿಳೆಯರು ಪಾಲ್ಗೊಂಡು ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿ ಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಒಕ್ಕೂಟದ ಕಾರ್ಯದರ್ಶಿ ಕೆ.ಸಿ.ಕವಿತ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ. ಶ್ರೀಕಂಠು ವಹಿಸಲಿದ್ದಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ನಮ್ಮ ಒಕ್ಕೂಟದ ಸುಮಾರು 7 ಸಾವಿರ ಸದಸ್ಯರು ತಪ್ಪದೇ ಭಾಗವಹಿಸುವಂತೆ ಮನವಿಯನ್ನು ಮಾಡಿದರು.ಒಕ್ಕೂಟದ ನಿರ್ದೇಶಕರಾದ ಚಿಕ್ಕತಾಯಮ್ಮ, ಪ್ರೇಮ, ರೇಣುಕಮ್ಮ, ಚಂದ್ರಕಲಾ, ರತ್ನಮ್ಮ, ಪರಿಮಳ, ಕಾಂತಮ್ಮ, ಜಯಶೀಲ, ನಾಗರತ್ನಮ್ಮ, ರತ್ನಮ್ಮ ಹಾಗೂ ನೌಕರರು ಸಿಬ್ಬಂದಿಗಳು ಉಪಸ್ಥಿತರಿದ್ದರು.