ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಖಂಡಿಸಿ ಬಿಜೆಪಿ ವತಿಯಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ತಿಂಗಳ 12ರಂದು ಮೈಸೂರಿನಲ್ಲಿರುವ ಮುಖ್ಯಮಂತ್ರಿಗಳ ಮನೆ ಮುಂದೆ ತಾವು ಸೇರಿದಂತೆ ಬಿಜೆಪಿಯ ಮುಖಂಡರಾದ ಆರ್. ಅಶೋಕ್ ಡಾ. ಸಿ.ಎನ್. ಅಶ್ವತ್ಥ್ನಾರಾಯಣ ಅವರನ್ನೊಳಗೊಂಡು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡುವ ಯತ್ನ ನಡೆಸಿದ್ದಾರೆ. ಇವರಿಂದ ಅವರ ಮುಖವಾಡ ಕಳಚಿದೆ ಎಂದು ಗುಡುಗಿದ್ದಾರೆಮುಡಾದಲ್ಲಿ ಭೂಸ್ವಾಧಿನಗೊಂಡಿದ್ದ ಮುಖ್ಯಮಂತ್ರಿಯವರ ಪತ್ನಿ ಅವರ ಹೆಸರಿನ ಜಮೀನಿಗೆ ಪರ್ಯಾಯವಾಗಿ ಜಮೀನು ನೀಡುವ ವಿಷಯಕ್ಕೆ ಸಂಬಂಧಪಟ್ಟಂತೆ ನಿಯಮಗಳು ಗಾಳಿಗೆ ತೂರಲಾಗಿದೆ.
ಕಾನೂನು ಬಾಹಿರವಾಗಿ ಹೆಚ್ಚು ನಿವೇಶನಗಳನ್ನು ಪಡೆಯಲಾಗಿದೆ. ನಿಯಮಾನುಸಾರ 40 60 ಅಳತೆಯ ಎರಡು ಪರ್ಯಾಯ ನಿವೇಶನಗಳನ್ನು ಪಡೆಯಬೇಕಾಗಿತ್ತು. ಆದರೆ 14 ನಿವೇಶನ ಪಡೆಯಲಾಗಿದೆ.ಈ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯವರ ಪತ್ನಿ ಅಣ್ಣ ಮಲ್ಲಿಕಾರ್ಜುನ ಸ್ವಾಮಿ ಪರಿವರ್ತಿತ ಜಮೀನನ್ನನು ಕೃಷಿ ಜಮೀನು ಎಂದು ಉಲ್ಲೇಖಿಸಿದ್ದಾರೆ.
ಹೀಗ ಅನೇಕ ಅಕ್ರಮಗಳು ನಡೆದಿದವೆ ಎಂದು ತಾವು ಮಾಡಿದ ಆರೋಪಗಳಿಗೆ ಪೂರಕ ಎನ್ನಲಾದ ಕೆಲ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.12ರಂದು ಮುಖ್ಯಮಂತ್ರಿ ಹಾಗು ಸಚಿವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.