ನೆಲಮಂಗಲ: ಗ್ರಾಮ ಪಂಚಾಯಿತಿ ಒಳಗಡೆ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದ ವಿಚಾರಕ್ಕೆ ಸಾರ್ವಜನಿಕ ಯುವರಾಜ್ ಹಾಗೂ ಪಿಡಿಒ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಂತ ಘಟನೆ ತಾಲ್ಲೂಕಿನ ಕುಲುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕುಲುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಾಲಕ್ಷ್ಮಿ ರವರನ್ನು ಪಂಚಾಯಿತಿಯ ಪ್ರಗತಿಯ ನೆಪವಡ್ಡಿ ಡಿಸೆಂಬರ್ 2023 ರಂದು ಅಮಾನತು ಮಾಡಲಾಗಿತ್ತು.ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಮಧ್ಯ ಪ್ರವೇಶ ಮಾಡಿ ನವಂಬರ್ 2024ನೇ ತಿಂಗಳಲ್ಲಿ ಕಟ್ಟುನಿಟ್ಟಾಗಿ ಆದೇಶ ಮಾಡಿ 4 ವಾರಗಳಲ್ಲಿ ವಿಚಾರಣೆ ಮುಗಿಯದೆ ಹೋದರೆ ಅಮಾನತು ಆದೇಶ ರದ್ದಾಗುವುದು ಎಂದು ಆದೇಶ ನೀಡಿರುತ್ತಾರೆ.
ಹೈಕೋರ್ಟ್ ನೀಡಿದ ಗಡುವು ಮುಗಿದ ನಂತರವೂ ಯಾವುದೇ ವಿಚಾರಣೆ ಮುಗಿಯದೆ ಇರುವುದರಿಂದ ವಕೀಲರ ನಿರ್ದೇಶನದಂತೆ ಶುಕ್ರವಾರ ಮಹಾಲಕ್ಷ್ಮಿ, ತಾಯಿ ಗಂಗಾಮಹಿಮಕ್ಕ ಮತ್ತು ತಮ್ಮ ಯುವರಾಜುರವರುಗ್ರಾಪಂಗೆ ಹೈಕೋರ್ಟ್ ಆದೇಶವನ್ನು ಪಡೆದು ತಾವು ಕಾನೂನು ಬಹಿರವಾಗಿ ಮಾಡಿದ ಅಮಾನತ್ತು ಆದೇಶ ಮಾನ್ಯಘನ ನ್ಯಾಯಾಲಯದಲ್ಲಿ ರದ್ದಾಗಿರುತ್ತದೆ.
ಆದರಿಂದ ಫೆಬ್ರವರಿ 2024 ರಿಂದ ಹಿಡಿದಿದ್ದ ವೇತನ ಪಾವತಿ ಮಾಡಿ ಪಂಚಾಯಿತಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಅರ್ಜಿ ನೀಡಲು ಪಂಚಾಯಿತಿಗೆ ಹೋದ ವೇಳೆ ಮಹಾಲಕ್ಷ್ಮಿ ತಮ್ಮ ಯುವರಾಜ್ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು ಇದನ್ನು ಗಮನಿಸಿದ ಪಿಡಿಒ ಯುವರಾಜಗೆ ಯಾಕೆ ವಿಡಿಯೋ ಮಾಡುತ್ತಿದ್ದೀಯಾ ಎಂದು ಗದರಿದ್ದಾರೆ ವಿಡಿಯೋ ಮಾಡಬಾರದ ಎಂದು ಯುವರಾಜ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ.
ಹೊಡೆದಾಡಿಕೊಂಡಂತ ವಿಡಿಯೋ ಜಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ಅವರು ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಮಹಾಲಕ್ಷ್ಮಿ ಕುಟುಂಬದವರು ಆರೋಪಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳ ಎಡವಟ್ಟು: ಪಿಡಿಒ ಹಾಗೂ ಮಹಾಲಕ್ಷ್ಮಿ ಕುಟುಂಬದವರು ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ನಮ್ಮನ್ನು ಅಡ್ಮಿಟ್ ಮಾಡ್ಕೋತೀನಿ ಎಂದು ಸಹಿ ಪಡೆದು ಪೋಲಿಸ್ ನವರು ಅರೆಸ್ಟ್ ಮಾಡಲು ಬಂದಾಗ ನಾವು ಅಡ್ಮಿಷನ್ ಮಾಡಿಕೊಂಡಿಲ್ಲ ಎಂದು ಸುಳ್ಳು ಹೇಳಿ ಅರೆಸ್ಟ್ ಮಾಡಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿಗಳು ಪಿಡಿಒ ಜೊತೆ ಶಾಮಿಲ್ ಆಗಿ ನಮಗೆ ಮೋಸ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮಹಾಲಕ್ಷ್ಮಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರ ವಿಚಾರಣೆ ಮುಖಾಂತರ ಸತ್ಯ ಸತ್ಯತೆ ಹೊರಬರಬೇಕಾಗಿದೆ.