ದಿನಾಂಕ ೨೭-೧೦-೨೦೨೪ ರಂದು ಯಲಹಂಕದ ರಾಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಿನಿಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬುವ ಸಲುವಾಗಿ ಪ್ರತಿವರ್ಷವೂ ಈ ಮಿನಿಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು.
೨೫ ವರ್ಷಗಳಿಂದ ಈ ವರೆಗೆ ಒಟ್ಟು ೨೦೬ ಓಟದ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಸುಮಾರು ೯ ಲಕ್ಷಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದುದು ಹೆಮ್ಮೆಯ ವಿಷಯವಾಗಿದೆ.
ಈ ವರ್ಷ ಆಯೋಜಿಸಿದ್ದ ಮಿನಿಥಾನ್ ಸ್ಪರ್ಧೆಯಲ್ಲಿ ಬೆಂಗಳೂರು ಮತ್ತು ಯಲಹಂಕದ ಸುತ್ತಮುತ್ತಲಿನ ೨೩ ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದು ಒಟ್ಟು ೧೭೫೩ ವಿದ್ಯಾರ್ಥಿಗಳು ಸ್ಫರ್ಧಿಸಿದ್ದರು.
ಮಿನಿಥಾನ್ ಓಟದ ಸ್ಪರ್ಧೆಯನ್ನು ರಾಯಾನ್ ಶಾಲೆಯಿಂದ ನಿಟ್ಟೆ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ತನಕ ೨ ರಿಂದ ೪ ಕಿಲೋಮೀಟರ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು, ೧೨, ೧೪ ಮತ್ತು ೧೬ ವಯೋಮಿತಿಯ ೬ ವರ್ಗದ ವಿದ್ಯಾರ್ಥಿಗಳಿದ್ದರು.
ಗಂಡು ಮತ್ತು ಹೆಣ್ಣು ಮಕ್ಕಳ ವಿಭಾಗಗಳು ಪ್ರತ್ಯೇಕವಾಗಿದ್ದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರುಣ್ ಸಾಮ್ಯುಯೆಲ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಪ್ರಾಂಶುಪಾಲರಾದ ಶ್ರೀಮತಿ ಕೆ.ರಾಜೇಶ್ವರಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳು ಓಟಕ್ಕೆ ಚಾಲನೆ ನೀಡಿದರು. ಸೌಂದರ್ಯ ಸೆಂಟ್ರಲ್ ಶಾಲೆಯವರು ಚಾಂಪಿಯನ್ ಶಿಪ್ ಗಳಿಸಿಕೊಂಡು ನಗದು ಬಹುಮಾನ ಮತ್ತು ಪದಕಗಳನ್ನು ತಮ್ಮದಾಗಿಸಿಕೊಂಡರು. ೩ನೇ ಬಹುಮಾನವನ್ನು ರಾಯಾನ್ ಅಂತರಾಷ್ಟಿçÃಯ ಶಾಲೆ, ಕುಂದನಹಳ್ಳಿಯ ವಿದ್ಯಾರ್ಥಿಗಳು ಗಳಿಸಿಕೊಂಡರು. ಅತಿಥಿಗಳು ಬಹುಮಾನ ಪ್ರಧಾನ ಮಾಡಿದರು.
ರಾಯಾನ್ ಶಾಲೆಯ ಛೇರ್ಮನ್ ಅಗಸ್ಟಿನ್ ಪಿಂಟೋ ಮತ್ತು ನಿರ್ದೇಶಕಿಯಾದ ಮೇಡಮ್ ಗ್ಪೇಸ್ ಪಿಂಟೋರವರು ಮಿನಿಥಾನ್ ಓಟದ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.