ಯಶಸ್ವಿ ಜೈಸ್ವಾಲ್ ಎಂಬ ಪ್ರತಿಭಾವಂತ ಯುವಕ ಟೀಂ ಇಂಡಿಯಾಗೆ ಕಾಲಿಟ್ಟ ದಿನದಿಂದ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾನೆ. ಇತ್ತೀಚೆಗಷ್ಟೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಪೇರಿಸಿದ ಅತಿ ಕಿರಿಯ ಕ್ರಿಕೆಟಿಗರ ಸಾಲಿಗೆ ಸೇರಿದ್ದ ಈ ಆರಂಭಿಕ ಬ್ಯಾಟರ್ ಇದೀಗ ಮತ್ತೊಂದು ವಿಶ್ವದಾಖಲೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ಅದು ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಹೊಡೆದ ದಾಖಲೆ.
ಟೆಸ್ಟ್ ಕ್ರಿಕೆಟ್ ಎಂದರೆ ಅದು ಖಂಡಿತವಾಗಿಯೂ ತಾಳ್ಮೆಯ ಪರೀಕ್ಷೆ. ಹೀಗಾಗಿ ಸಿಕ್ಸರ್ ಗಳ ಅಬ್ಬರ ಕೊಂಚ ಕಡಿಮೆಯೆಂದೇ ಹೇಳಬೇಕು. ಆದರೂ ಟೆಸ್ಟ್ ಕ್ರಿಕೆಟ್ ಗೆ ಏಕದಿನ ಪಂದ್ಯದ ವೇಗವನ್ನು ತಂದುಕೊಟ್ಟ ಬ್ಯಾಟರ್ ಗಳು ಇದ್ದೇ ಇರುತ್ತಾರೆ. ಈ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುವವರು ಖಂಡಿತವಾಗಿಯೂ ಭಾರತದ ವೀರೇಂದ್ರ ಸೆಹ್ವಾಗ್. ಇದರಲ್ಲಿ ಎರಡು ಮಾತಿಲ್ಲ.
ಈ ವರ್ಷ ಅದನ್ನು ಮುರಿಯುವಲ್ಲಿ ಯಶಸ್ವಿಯಾಗಿರುವ ಯಶಸ್ವಿ ಜೈಸ್ವಾಲ್ ಈಗ ಬಹಳ ಮುಂದೆ ಹೋಗಿದ್ದಾರೆ. ಆ್ಯಡಮ್ ಗಿಲ್ ಕ್ರಿಸ್ಟ್ (22 ಸಿಕ್ಸರ್), ಬೆನ್ ಸ್ಟೋಕ್ಸ್ (26) ದಾಖಲೆಯನ್ನೂ ಮೀರಿ ನಿಂತಿರುವ ಅವರು ವಿಶ್ವದಾಖಲೆಯ ವಿಶ್ವದಾಖಲೆಯ ದ್ವಾರದಲ್ಲಿ ನಿಂತಿದ್ದಾರೆ.