ದೇವನಹಳ್ಳಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಕರ್ನಾಟಕ ಸರ್ಕಾರ ಮುಂದಾಗಿದು ವುದು ಸಂತಸದ ವಿಚಾರ ಜೊತೆಗೆ ಸಂವಿಧಾನ ಓದು ಕಾರ್ಯಕ್ರಮ ಸಮುದಾಯ ಗಳ ಒಗ್ಗೂಡಿಕೆಗೆ ಸಾಕ್ಷಿಯಾಗಲಿವೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದ್ಯಕ್ಷ ವೆಂಕಸ್ವಾಮಿ ಅವರು ತಿಳಿಸಿದರು.
ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿ ಆವರಣ ದಲ್ಲಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಪರ ಸಂಘಟನೆಗಳಿಂದ ನಡೆಸಿದ ಸಂವಿಧಾನದ ಓಧು ಕಾರ್ಯ ಕ್ರಮದ ಅಂಗವಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಉತ್ತಳಿಕೆ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿ, ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಇಡೀ ರಾಷ್ಟ್ರಕ್ಕೆ ಮಾದರಿ.
ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿಸಲು, ಬಲಿಷ್ಠ ರಾಷ್ಟ್ರ ಕಟ್ಟಲು ಪ್ರಜಾಪ್ರಭುತ್ವ ದಿನ ಆಚರಿಸಲಾ ಗುತ್ತಿದೆ. ಸಂವಿಧಾನ ಹಲವು ಅವಕಾಶ ಗಳನ್ನು ಕಲ್ಪಿಸಿದ್ದು, ಎಲ್ಲರು ಅವುಗಳ ಸದುಪಯೋಗ ಪಡೆದು ಕೊಂಡು ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು.ಸಂವಿಧಾನ ಪೀಠಿಕೆ ಆಚರಣೆ ಮಾಡಿದರೆ ಸಾಲದು ಅದರ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಅಖಿಲ ಭಾರತ ಮಟ್ಟದಲ್ಲಿನ ಬೌದ್ಧ ಮಂಡಳಿಗೆ 9 ಜನರಲ್ಲಿ ಬೌದ್ದ ಬಿಕ್ಕು, ವಕೀಲರು, ತಜ್ಞರನ್ನು ನೇಮಕ ಮಾಡಲೆಂದು ಅಂಬೇಡ್ಕರ್ ಅವರ ಸಂವಿಧಾನ ಓದು ಹಾಗೂ ಅದರ ಮೌಲ್ಯ, ಜಾಗೃತಿ ಮತ್ತು ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಧರಣಿಯನ್ನು ನಡೆಸಿ ಮನವಿ ಪತ್ರವನ್ನು ದೇಶದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ, ರಾಷ್ಟ್ರಪತಿಗಳು ಸಲ್ಲಿಸಲಿದ್ದೇವೆಂದರು.
ಕಾರ್ಯಕ್ರಮದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ಘಟಕದ ಅಧ್ಯಕ್ಷ ನಾಗವೇಣಿ, ಬಿಎಸ್ಪಿ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಮುಖಂಡ ರಾದ ರಮೇಶ್, ಬೆಟ್ಟಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.