ಬೆಂಗಳೂರು: ನಟ ದರ್ಶನ್ ಆಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿಗಳು, ಆರೋಪಿಗಳ ಚಲನವಲನ, ಓಡಾಡಿರುವ ಏರಿಯಾಗಳು, ಮೃತದೇಹ ಸಾಗಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿ ಸಂಗ್ರಹವಾಗಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಈವರೆಗೆ 33 ಕ್ಕು ಹೆಚ್ಚು ಸಿಸಿಟಿವಿ ದೃಶ್ಯಾವಳಿ ಸಂಗ್ರಹವಾಗಿದೆ.
ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲನೆ ನಡೆಸಿದ ಪೊಲೀಸರು ಕೊಲೆ ಪ್ರಕರಣದ ಪ್ರಮುಖ ಸಾಕ್ಷ್ಯಗಳಾದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.ರೇಣುಕಾಸ್ವಾಮಿ ಕೊಲೆಗು ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಿಂದ ಪಟ್ಟಣಗೆರೆ ಶೆಡ್ವರೆಗಿನ ಮಾರ್ಗ ಮಧ್ಯೆದ ಸಿಸಿಟಿವಿ ದೃಶ್ಯಗಳು, ನಂತರ ಪಟ್ಟಣಗೆರೆ ಶೆಡ್ನಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದಾರೆ.ಬಳಿಕ ಶೆಡ್ನಿಂದ ಸುಮನಹಳ್ಳಿ ರಾಜಕಾಲುವೆ ಮಾರ್ಗದಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹವಾಗಿದ್ದು, ರಸ್ತೆಯ ಬದಿಯ ಎಲ್ಲಾ ಪೂಟೇಜ್ ಸಂಗ್ರಹಿಸಿ ಚಲನವಲನ ಓಡಾಟದ ದೃಶ್ಯಾವಳಿ ಸಂಗ್ರಹಿಸಲಾಗಿದೆ.
ನಂತರ ದರ್ಶನ್ ಮನೆ ಹಾಗೂ ಪವಿತ್ರಾಗೌಡ ಮನೆ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದಾರೆ. ಹೀಗೆ ಈವರೆಗೆ 33 ಕ್ಕು ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿ ಸಂಗ್ರಹ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನ ಎಫ್ಎಸ್ಎಲ್ ಹಾಗೂ ಸಿಐಡಿ ತಾಂತ್ರಿಕ ಘಟಕಕ್ಕೆ ಸಿಸಿಟಿವಿ ದೃಶ್ಯಾವಳಿ ರವಾನೆ ಮಾಡಲಾಗಿದ್ದು, ಎರಡು ಕಡೆ ತಾಂತ್ರಿಕವಾಗಿ ಪರಿಶೀಲನೆ ನಡೆಸಿರೋ ಅಧಿಕಾರಿಗಳು ಸಿಸಿಟಿವಿ ಪೂಟೇಜ್ ರಿಪೋರ್ಟ್ಸ್ಗಾಗಿ ಪೊಲೀಸರು ಕಾದಿದ್ದಾರೆ.