ದೇವನಹಳ್ಳಿ: ಹೈನುಗಾರಿಕೆಯಲ್ಲಿ ಗ್ರಾಮೀಣ ಪ್ರದೇಶ ಪ್ರಗತಿಪರ ರೈತರು ಅಭಿವೃದ್ಧಿ ಹೊಂದುವ ಉದ್ದೇಶದಿಂದ ಶ್ರೇಯೋಭಿವೃದ್ಧಿ ರೈತ ಉತ್ಪಾದಕರ ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಎಂದು ರೈತ ಉತ್ಪಾದಕರ ಕಂಪನಿ ಕಾರ್ಯದರ್ಶಿ ಪಿಳ್ಳೆ ಗೌಡ ತಿಳಿಸಿದರು.
ದೇವನಹಳ್ಳಿ ತಾಲೂಕು ಬೈಚಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಶ್ರೇಯೋಭಿವೃದ್ಧಿ ರೈತ ಉತ್ಪಾದಕರ ಸಹಕಾರ ಕಂಪನಿಯ ಉಚಿತ ಸದಸ್ಯತ್ವ ಅಭಿಯಾನ ಅಂಗವಾಗಿ ಸೇವಾ ಸೌಲಭ್ಯಗಳ ಕರಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಗಳಿಸಲು ಹಾಗೂ ಹಸು, ಕುರಿ ಕೋಳಿ ಮೇಕೆ ಮುಂತಾದ ಸಾಕು ಪ್ರಾಣಿಗಳಿಗೆ ಅಗತ್ಯ ಸೇವಾ ಸಹಕಾರ ನೀಡುವ ಉದ್ದೇಶ ದಿಂದ ನಮ್ಮ ಸಂಸ್ಥೆ ನುರಿತ ವೈದ್ಯರಿಂದ ಕಾರ್ಯಗಾರದ ಜತೆಗೆ ಉಚಿತ ಔಷಧ ಉಪಚಾರ, ಬೆಳೆಗಳಿಗೆ ಅಗತ್ಯ ಗುಣಮಟ್ಟದ ಬೀಜೋಪಚಾರ,ಸಾವಯಾವ ಕೃಷಿ ಪದ್ದತಿ ಇನ್ನಿತರ ಸೌಲಭ್ಯಗಳ ಬಗ್ಗೆಜಾಗೃತಿ ಮೂಡಿಸಿ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದುವ ಉದೇಶದಿಂದ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಹೈನುಗಾರಿಕೆ ಅವಲಂಬಿತ ನಮ್ಮಲಿನ ರೈತ ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಮಾಡಿಕೊಳ್ಳುವು ದರಿಂದ ಹೆಚ್ಚಿನ ಅನುಕೂಲ ಪಡೆದುಕೊಳ್ಳಬಹುದು ಆದ್ದರಿಂದ ಈಗಾಲೇ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ನಮ್ಮ ಸಂಸ್ಥೆಯ ಯೋಜನೆಗಳ ಬಗ್ಗೆ ಹಾಗೂ ಸರ್ಕಾರದ ಸೌಲಭ್ಯ ಗಳು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಚೇರಿ ಸಹಾಯಕಿಶಶಿಕಲಾ, ರೈತ ಪರ ಸಮಾಜ ಸೇವಕರಾದ ಸುರೇಶ್ ಪಿ. ಮುನಿಯಪ್ಪ, ಕೃಷ್ಣಪ್ಪ, ಅನ್ವರ್ ಸಾಬಿ, ಮುನಿರಾಜು ನಾರಾಯಣಸ್ವಾಮಿ, ವೆಂಕಟೇಶಪ್ಪ, ರಾಜಪ್ಪ, ರಾಮಕ್ಕ ಬೈಚಾಪುರದ ಗ್ರಾಮಸ್ಥರು ಹಾಗೂ ಪ್ರಗತಿಪರ ರೈತರು ಹಾಜರಿದ್ದರು.