ಮುಳವಾಗಲು: ರೋಟರಿ ಕ್ಲಬ್ ರೊಟೇರಿಯನ್ ಆಗಿ ಅಧಿಕಾರ ಸ್ವೀಕರಿಸುವುದು ಮುಖ್ಯವಲ್ಲ ಅಂತಹ ಗೌರವಯುತ ಸ್ಥಾನದಲ್ಲಿದ್ದು ಸಮಾಜ ಸೇವೆ ಮತ್ತು ರೋಟರಿ ಕ್ಲಬ್ ಉಳಿವಿಗಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಮೃದ್ಧಿ ವಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬೈರಕೂರು ಹೋಬಳಿ ಕಾಡೆನಹಳ್ಳಿ ನಾಗರಾಜ್ ತೋಟದ ಮನೆಯ ಆವರಣದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸ್ಥಾನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನನ್ನಂತ ಜನಪ್ರತಿನಿಧಿಗಳು ತಾಲ್ಲೂಕು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಇಂಥ ಸಂಸ್ಥೆಗಳ ಸಹಕಾರ ನಮಗೆ ಬೇಕಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿಗೆ ತಿಪ್ಪ ದೊಡ್ಡಿ ಮತ್ತು ನಂಗಲಿ ಸರ್ಕಾರಿ ಶಾಲೆ ಮತ್ತು ಮತ್ತೊಂದು ಈಗಾಗಲೇ ಪ್ರಾರಂಭವಾಗಿರುವ ಸರ್ಕಾರಿ ಶಾಲೆಯ ಕಟ್ಟಡಗಳ ಕಾಮಗಾರಿ ವೀಕ್ಷಿಸಿದಾಗ ಇದು ಸರ್ಕಾರಿ ಶಾಲೆಯ ಕಟ್ಟಡ ಅಲ್ಲ ಇದು ಯಾವುದೋ ಒಂದು ಖಾಸಗಿ ಶಾಲೆಯ ಕಟ್ಟಡ ಎಂದು ಭಾವಿಸಬಹುದು ಅಂತಹ ಉತ್ತಮ ರೀತಿಯ ಸರ್ಕಾರಿ ಶಾಲಾ ಕಟ್ಟಡಗಳು ನಿರ್ಮಾಣ ವಾಗುತ್ತಿರುವುದು ಗಮನಿಸುತ್ತೇವೆ ಆದ್ದರಿಂದ ಇಂತಹ ಸಂಸ್ಥೆಗಳಲ್ಲಿ ನಾನು ಸಹ ಸದಸ್ಯನಾಗಬೇಕು ಎಂಬ ಆಸೆ ಇತ್ತು. ಆದರೆ ಈ ದಿವಸ ಇಲ್ಲಿಯೇ ನಾನು ರೋಟರಿ ಕ್ಲಬ್ ಸದಸ್ಯನಾಗಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಸದಸ್ಯತ್ವದ ಜವಾಬ್ದಾರಿ ಹೊಂದಿರುವ ಕಾಡೇನಹಳ್ಳಿ ಕೆಎನ್ ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಈ ಘಟಕ ಪ್ರಾರಂಭಿಸಬೇಕಾದರೆ ನಾನ ಅಡೆತಡೆಗಳನ್ನು ನಿಭಾಯಿಸಿದ್ದೇವೆ ಅಂತಹ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರು ಕೈಜೋಡಿಸಿ ದರಿಂದ ಉತ್ತಮವಾದ ಕಟ್ಟಡ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ರೋಟರಿ ಕ್ಲಬ್ ಸದಸ್ಯತ್ವ ಪಡೆಯುವ ಎಲ್ಲಾ ಸದಸ್ಯರು ಜೀವಾವಧಿ ಸದಸ್ಯರಾಗಿ ಕ್ಲಬ್ ನಲ್ಲಿ ಕೆಲಸ ಮಾಡಿದಾಗ ಮಾತ್ರ ಅವರು ಪಡೆಯುವ ಸದಸ್ಯತ್ವಕ್ಕೆ ನಿಜವಾದ ಗೌರವ ಸಿಗುತ್ತದೆ ಎಂದು ತಿಳಿಸಿದರು.ರೋಟರಿ ಕ್ಲಬ್ ಸದಸ್ಯರಾದ ಮೇಲೆ ಪ್ರತಿಯೊಬ್ಬರಿಗೂ ಅಧ್ಯಕ್ಷ ಸ್ಥಾನದ ಅಧಿಕಾರ ಸಿಗುತ್ತದೆ ಆದರೆ ಅಧಿಕಾರ ಅವಧಿಯಲ್ಲಿ ನಾವು ಉತ್ತಮವಾಗಿ ಮಾಡುವ ಸಮಾಜಮುಖಿ ಸೇವೆಗಳು ಬಹು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಸದಸ್ಯರು ಅಧಿಕಾರದಲ್ಲಿದ್ದಾಗ ಅವರು ಮಾಡುವ ಸೇವೆಯಿಂದ ಅವರಿಗಿನ್ನೂ ಉತ್ತಮವಾದ ಸ್ಥಾನಮಾನ ಸಿಗುವುದರಲ್ಲಿ ಸಂಶಯವೇ ಇಲ್ಲ ಅದನ್ನು ಗಮನದಲ್ಲಿಟ್ಟುಕೊಂಡು ನಾವು ಇನ್ನೂ ಉತ್ತಮವಾದ ಸ್ಥಾನಕ್ಕೆ ತಲುಪುವ ರೀತಿಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಎರಡನೆಯ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ಪೀಪಕರಿಸಿದ ನಗವಾರ ಸತ್ಯಣ್ಣ ಮಾತನಾಡಿ, ನನಗೆ ರೋಟರಿ ಕ್ಲಬ್ ಸದಸ್ಯನಾಗಿ ಸದಸ್ಯತ್ವ ಪಡೆದ ಕೆಲವೇ ತಿಂಗಳಲ್ಲಿ ನನ್ನನ್ನು ನಮ್ಮ ಕ್ಲಬ್ ಮುಖ್ಯಸ್ಥರು ಮತ್ತುಸದಸ್ಯರು ನನಗೆ ಅಧ್ಯಕ್ಷ ನಾಗಿ ಸೂಚಿಸಿದರು ಆದರೆ ಆ ಸಂದರ್ಭದಲ್ಲಿ ಇಡೀ ದೇಶ ವ್ಯಾಪ್ತಿ ಕರೋನ ಮಹಾಮಾರಿ ಆಡಿದ್ದರಿಂದ ನನ್ನ ಅವಧಿ ಪೂರ್ತಿ ಮಾಸ್ಕ್, ಸ್ಯಾನಿಟೈಸರ್, ಹಾಗೂ ರೋಗದಿಂದ ಬಳಲುತ್ತಿದ್ದ ರೋಗಿಗಳಿಗೆ ಅವರಿಗೆ ಬೇಕಾದ ಔಷಧಿಗಳು ನಮ್ಮ ರೋಟರಿ ಕ್ಲಬ್ ವತಿಯಿಂದ ಸರಬರಾಜು ಮಾಡುವ ಮುಖಾಂತರ ನನ್ನ ಅಧಿಕಾರ ಅವಧಿ ಮುಗಿಯಿತು ಎಂದು ತಿಳಿಸಿದರು.
ಆದರೆ ಮತ್ತೆ ನನ್ನ ಸೇವೆಯನ್ನು ಗುರುತಿಸಿ ಎರಡನೇ ಬಾರಿಗೆ ರೋಟರಿ ಕ್ಲಬ್ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ನನ್ನ ಮೇಲೆ ಇಟ್ಟಿರುವ ಭರವಸೆಗೆ ತಕ್ಕಮಟ್ಟಿಗೆ ನಾನು ವಿದ್ಯಾಭ್ಯಾಸಕ್ಕೆ ಆದ್ಯತೆಯನ್ನು ನೀಡಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.ನನ್ನ ಅವಧಿಯಲ್ಲಿ ರೋಟರಿ ಕ್ಲಬ್ ಕಚೇರಿಯನ್ನು ಮಾದರಿ ಕಚೇರಿಯಾಗಿ ಮಾಡಲು ಗುರಿಯನ್ನು ಹೊಂದಿದ್ದೇವೆ ಅದಕ್ಕೆ ನಮ್ಮ ತಾಲೂಕಿನ ಶಾಸಕ ಸಮೃದ್ಧಿ ಮಂಜುನಾಥ್ ಸಹಕಾರದೊಂದಿಗೆ ರಸ್ತೆ ಮತ್ತು ಶೌಚಾಲಯ ಹಾಗೂ ಕಟ್ಟಡದ ಪೀಠೋಪಕರಣಗಳು ಮತ್ತು ಬಣ್ಣದ ವ್ಯವಸ್ಥೆಯನ್ನು ಸಹ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ರೋಟರಿ ಕ್ಲಬ್ ಗೌರವಾನೀತ ಹಾನರ್ ರೊಟೇರಿಯನ್ ಅನಿಲ್ ಗುಪ್ತ, ಜುನಾಲ್ ಗೌರ್ನರ್ ರೊಟೇರಿಯನ್ ರಾಜಕುಮಾರ್, ಅಸಿಸ್ಟೆಂಟ್ ಗೌರ್ನರ್ ರೊಟೇರಿಯನ್ ಪ್ರಸನ್ನ ಕುಮಾರ್, ಮಾಜಿ ರೊಟೇರಿಯನ್ ಹಾಲಿ ಕಾರ್ಯದರ್ಶಿ ಆರ್ ಶ್ರೀನಿವಾಸ್ ರೆಡ್ಡಿ,ಎನ್ ರಾಘವೇಂದ್ರ, ಮಾಜಿ ಕಾರ್ಯದರ್ಶಿ ರೊಟೇರಿಯನ್ ಪಿಎಸ್ ರಮೇಶ್, ಖಜಾಂಚಿ ರೋಟೇರಿಯನ್ ಆರ್ ಉತ್ತನೂರು ಅರುಣ್ ಕುಮಾರ್, ರೋಟರಿ ಮಹಿಳಾ ಸಬಲೀಕರಣ ಅಧ್ಯಕ್ಷೆ ರೊಟೇರಿಯನ್ ಸರಿತಾ ಬಾಲಾಜಿ, ಜೆಡಿಎಸ್ ತಾಲ್ಲೂಕು ಕಾರ್ಯದರ್ಶಿ ನೆಲ್ಲೂರು ರಘುಪತಿ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಾಮೇಗೌಡ, ಯುವ ಮುಖಂಡರಾದ,ಹೆಬ್ಬಿಣಿ ಪ್ರಭಾಕರ್, ಕೌತನಹಳ್ಳಿ ಮುನಿಸ್ವಾಮಿ ಗೌಡ, ಹಾಗೂ ರೋಟರಿ ಕ್ಲಬ್ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.