ಮಾಲೂರು: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ಅಧ್ಯಯನ ಪ್ರವಾಸವನ್ನು ಮಾಲೂರು ತಾಲೂಕಿನಿಂದ ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಪ್ರಗತಿ ಪರ ರೈತ ಮಹಿಳೆಯಾದ ನಾಗಮಣಿ ರವರ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದರು.
ತಾಲ್ಲೂಕಿನ ಕೃಷಿ ಅಧಿಕಾರಿಯಾದ ಮಧುರಾಜ್ ಮಾತನಾಡಿ. ನಾಗಮಣಿ ರವರ ತೋಟದ ಮನೆಯಲ್ಲಿ ಡ್ರೈ ಮಾಡುವ ಸೋಲಾರ್ ಘಟಕವನ್ನು ಇವರ ಮನೆಯಲ್ಲಿ ಅಳವಡಿಸಿಕೊಂಡು ಹಣಬೆ ಬೇಸಾಯ ಸಿರಿಧಾನ್ಯಗಳ ಮೌಲ್ಯವರ್ಧನೆ ಹಾಗೂ ಅಗಸೆ ಸೊಪ್ಪು ಸೊಪ್ಪು ನುಗ್ಗೆ ಸೊಪ್ಪು ಕರಿಬೇವು ಸೊಪ್ಪು ಇನ್ನಿತರ ಸೊಪ್ಪುಗಳನ್ನು ಡ್ರೈ ಮಾಡಿ ಒಣಗಿಸಿ ಅದನ್ನು ಪ್ಯಾಕೆಟ್ ಮಾಡಿ ಮಾರಾಟ ಮಾಡುವ ವಿಧಾನಗಳ ಮೂಲಕ ಕಡಿಮೆ ಖರ್ಚು ಹೆಚ್ಚು ಆದಾಯ ಗಳಿಸುವ ಬಗ್ಗೆ ಮಾಹಿತಿ ನೀಡಿ ಪ್ರತಿ ಸದಸ್ಯರಿಗೆ ಸಾಲ ಕೊಡುವ ಮೂಲಕ.
ಕನಿಷ್ಠ 100000 ದಿಂದ 500000 ಸಾಲ ಪಡೆದು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಸದಸ್ಯರಿಗೆ ತರಬೇತಿ ಪಡೆದುಈ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಲು ಸಹಾಯಕ ವಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರಗತಿ ಪರ ರೈತ ಮಾಹಿಳೆಯಾದ ನಾಗಮಣಿ, ಸೇವಪ್ರತಿನಿಧಿಯಾದ ಮಂಜುಳಾ ಹಾಗೂ ಸ್ವಹಾಯ ಸಂಘದ ಸದಸ್ಯರು ಭಾಗವಹಿಸಿದರು.