ದೇವನಹಳ್ಳಿ : ಜುಲೈ31ರಂದು ನಿವೃತ್ತಿಯಾದ ದೇವನಹಳ್ಳಿ ತಾಲೂಕು ತಹಸೀಲ್ದಾರ್ ಶಿವರಾಜ್ರವರಿಗೆ ತಾಲೂಕು ಕಂದಾಯ ಇಲಾಖಾ ನೌಕರರಿಂದ ದೇವನಹಳ್ಳಿ ತಾಲೂಕು ಆಡಳಿತ ಭವನದಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಶಿರಸ್ತೆದಾರ್ ಭರತ್ ಮಾತನಾಡಿ ತಹಸೀಲ್ದಾರ್ ಶಿವರಾಜ್ ನಮಗೆ ಒಬ್ಬ ಗುರುಗಳಿದ್ದ ಹಾಗೆ ಪ್ರತಿಯೊಂದು ವಿಷಯಗಳಲ್ಲಿ ಯಾವರೀತಿ ಪೈಲ್ಗಳನ್ನು ನಿಭಾಯಿಸಬೇಕು,
ಅದರಲ್ಲಿ ಯಾವ ದೋಷಗಳಿವೆ ಎಂದು ತಿಳಿಸಿದಂತಹವರು, ನಮ್ಮ ಎಲ್ಲಾ ಕೇಸ್ ವರ್ಕರ್ಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ನಾವುಕೂಡ ಉತ್ತಮವಾಗಿ ಕೆಲಸ ಮಾಡುತ್ತೇವೆ, ದೇವನಹಳ್ಳಿಯಲ್ಲಿ ಎರಡೂವರೆ ವರ್ಷ ಕೆಲಸ ಮಾಡಿರುವ ಇವರಂತಹ ತಹಸೀಲ್ದಾರ್ ಬರಲಿ ಎಂಬುದು ನಮ್ಮ ಕೋರಿಕೆ ಎಂದರು.
ಕೊರಚರಪಾಳ್ಯ ಶಾಲೆಯ ದೈಹಿಕ ಶಿಕ್ಷಕ ಪುಟ್ಟಸ್ವಾಮಿ ಮಾತನಾಡಿ ತಹಸಿಲ್ದಾರ್ ಶಿವರಾಜ್ರವರು ಇಷ್ಟು ಬೇಗ ನಿವೃತ್ತಿ ಹೊಂದಿದ್ದಾರೆ ಎಂದು ಗೊತ್ತಾಗುವುದೇ ಇಲ್ಲ ಇನ್ನು ಹುಡುಗರ ಹಾಗೆ ಕಾಣುತ್ತಾರೆ , ಅವರ ಕಾರ್ಯವೈಖರಿಯನ್ನು ನೋಡಿದರೆ ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದರೆಂದರೆ, ಸ್ವಾತಂತ್ರಯ ದಿನಾಚರಣೆ ಇರಬಹುದು, ರಾಷ್ಟ್ರೀಯ ಹಬ್ಬ, ವಿವಿಧ ಪುಣ್ಯಪುರುಷರ ಜಯಂತಿ ಪುಣ್ಯಸ್ಮರಣೆ ಎಲ್ಲವನ್ನು ಉತ್ತಮವಾಗಿ ಆಯೋಜಿಸಿದಂತಹವರು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ತಹಸೀಲ್ದಾರ್ ಶಿವರಾಜ್ ಮಾತನಾಡಿ ಸರ್ಕಾರಿ ಕೆಲಸಕ್ಕೆ ಯಾವುದೇ ಅಧಿಕಾರಿಯಾಗಲಿ ನಿವೃತ್ತಿ ಹೊಂದಲೇಬೇಕು, ನಾನು ನನ್ನ ಅವಧಿಯಲ್ಲಿ ಯಾವುದೇ ದಕ್ಕೆ ಬರದ ಹಾಗೆ ಕೆಲಸ ಮಾಡಿದ್ದೇನೆ, ತಾಲೂಕಿನ ಎಲ್ಲಾ ಕಂದಾಯ ಅಧಿಕಾರಿಗಳು ಸಿಬ್ಬಂದಿ ನನಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾಧಗಳನ್ನು ತಿಳಿಸುತ್ತೇನೆ, ಸರ್ಕಾರಿ ಕೆಲಸ ಮಾಡುವ ಎಲ್ಲಾ ನಾವು ಅಧಿಕಾರದಲ್ಲಿದ್ದಾಗ ಗೌರವದಿಂದ ಬಡಜನರಿಗೆ ಸಾರ್ವಜನಿಕರಿಗೆ ಕೆಲಸ ಮಾಡಿಕೊಟ್ಟರೆ ಅವರು ನಮಗೆ ಆಶೀರ್ವದಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ, ಅದೇ ನಮಗೆ ನಿವೃತ್ತಿ ಜೀವನಕ್ಕೆ ಶ್ರೀರಕ್ಷೆಯಾಗಲಿದೆ, ನನಗೆ ಬೀಳ್ಗೊಡುಗೆ ನೀಡಿದ್ದಕ್ಕಾಗಿ ಅಭಾರಿಯಾಗಿರುತ್ತೇನೆ, ಮುಂದೆ ಬರುವ ಯಾವುದೇ ಉನ್ನತ ಅಧಿಕಾರಿಗಳಿಗೆ ಉತ್ತಮ ಸಹಕಾರ ನೀಡಿ ಎಂದು ತಿಳಿಸಿದರು.
ಈ ವೇಳೆಯಲ್ಲಿ ಈ ಸಮಯದಲ್ಲಿ ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್, ಗ್ರೇಡ್2 ತಹಸೀಲ್ದಾರ್, ಉಷಾ, ಶಿರಸ್ಥೆದಾರ್ ಬಿ.ಜಿ.ಭರತ್, ಉಪತಹಸೀಲ್ದಾರ್ಗಳಾದ ಕುಂದಾಣ ಚೈತ್ರ, ಚನ್ನರಾಯಪಟ್ಟಣ ಸುರೇಶ್, ಚನ್ನರಾಯಪಟ್ಟಣ ರಾಜಸ್ವ ನಿರೀಕ್ಷಕ ಡಿ.ಸುದೀಪ್, ಕುಂದಾಣ ರಾಜಸ್ವ ನಿರೀಕ್ಷಕ ಹನುಮಂತರಾಯಪ್ಪ, ದೇವನಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ದರ್ಮೇಗೌಡ, ಮದುಗಿರಿ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಕುಮಾರ್, ಅಬ್ಕಾರಿ ಇನ್ಸ್ಪೆಕ್ಟರ್ ಸುನಿಲ್ಕುಮಾರ್, ರಾಮಕೃಷ್ಣಪ್ಪ, ಚನ್ನರಾಯಪಟ್ಟಣ ಗ್ರಾಮ ಆಡಳಿತಾಧಿಕಾರಿ ಸುಬ್ರಮಣಿ, ಉಪೇಂದ್ರ, ಸತ್ಯನಾರಾಯಣ, ಮಹೇಶ್ ಆಚಾರ್, ಮಹೇಶ್, ಗಿರೀಶ್, ರಮೇಶ್, ರಾಮಚಂದ್ರ, ರಮ್ಯ, ಸಂತೋಷ್ ಹಂಚಿನ ಮನೆ, ಲಾವಣ್ಯ ಸೇರಿದಂತೆ ಅನೇಕರು ಹಾಜರಿದ್ದರು.