ದೇವನಹಳ್ಳಿ: ಕಠಿಣ ಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ.ಸೂಕ್ತ ಚಿಕಿತ್ಸೆ ನೀಡಿ ರೋಗಿಗೆ ಪುನರ್ಜನ್ಮ ನೀಡುವ ವೈದ್ಯರು ದೇವರಿಗೆ ಸಮಾನ. ರೋಗಿಗಳ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಮಾಜದಲ್ಲಿ ವೈದ್ಯರಿಗೆ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮೊದಲು ರೋಗಿಗಳ ಆರೋಗ್ಯ ಸಮಸ್ಯೆಗಳನ್ನು ಆಲಿಸಿ, ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
ಜನರ ಜೀವನವನ್ನು ಉಳಿಸುವ ವೈದ್ಯರಿಗಾಗಿ ವಿಶ್ವ ವೈದ್ಯರ ದಿನಾಚರಣೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಇನ್ನೋವೇಟರ್ಸ್ ಇಂಟರ್ನ್ಯಾಷನಲ್ ಶಾಲೆಯ ಶಿಕ್ಷಕಿ ಮಾನಸ ತಿಳಿಸಿದರು.ಅವರು ಚನ್ನರಾಯಪಟ್ಟಣ ರಸ್ತೆ ಗೋಕರೆ ಬಳಿ ಇರುವ ಇನ್ನೋವೇಟರ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರ ಜೊತೆಗೂಡಿ ವಿವಿಧ ಆಸ್ಪತ್ರೆಗಳಿಗೆ ಬೇಟಿ ನೀಡಿ ಅಲ್ಲಿನ ಡಾಕ್ಟರ್ಗಳಿಗೆ ಡಾ. ಮಂಜುಳಾ ಲೀನಾ ಆಸ್ಪತ್ರೆ, ಡಾ. ಶ್ವೇತಾ ಲೀನಾ ಆಸ್ಪತ್ರೆ., ಡಾ. ಅನಿಲ್ಕುಮಾರ್ ಲೀನಾ ಆಸ್ಪತ್ರೆ., ಡಾ. ಮುನಿರಾಜ್, ಡಾ.ವಿಕಾಸ್ ಶ್ರೀ ಶಿರಡಿ ಸಾಯಿ ಆಸ್ಪತ್ರೆ, ಡಾ. ನರಸಾರೆಡ್ಡಿ ಮಾನಸ ಆಸ್ಪತ್ರೆ, ಡಾ.ರಾಜೇಶ್ ದೃಷ್ಟಿ ಆಸ್ಪತ್ರೆ, ಡಾ.ಪ್ರತಿಭಾ ಪ್ರತಿಭಾ ಕ್ಲಿನಿಕ್, ಡಾ. ಕೆ.ಬಿ.ಮಂಜುನಾಥ್ ಸುರಕ್ಷಾ ಆಸ್ಪತ್ರೆ, ಡಾ. ಅನುಷಾ ದಂತ ಆಸ್ಪತ್ರೆ ಇವರುಗಳಿಗೆ ಪುಷ್ಪಗಳನ್ನು ನೀಡಿ ಅವರಿಗೆ ಶುಭಕೋರಿದರು.
ನಂತರ ಮಾತನಾಡಿ ಎಂ.ಬಿ.ಬಿ.ಎಸ್ ಮಾಡುವುದು ಸುಲಭವಲ್ಲ. ಐದು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ವೈದ್ಯಕೀಯ ಪಧವಿ ಪಡೆದು ವೃತ್ತಿ ಆರಂಭಿಸಿ ರಾತ್ರಿ-ಹಗಲು ಎನ್ನದೆ ಅಧ್ಯಯನ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತಾರೆ ಅಂತಹ ವೈದ್ಯರ ಸೇವೆ ಅನನ್ಯವಾಗಿದೆ. ರೋಗಿಗಳಿಗೆ ಪ್ರೀತಿ ವಿಶ್ವಾಸದಿಂದ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡುತ್ತಾರೆ ಆದ್ದರಿಂದಲೇ ಅವರನ್ನು ವೈದ್ಯೋ ನಾರಾಯಣೋ ಹರಿ ಎಂದು ಕರೆಯುತ್ತಾರೆ ಎಂದರು.
ಇದೇ ಸಮಯದಲ್ಲಿ ಶಾಲೆಯ ಶಿಕ್ಷಕರಾದ ಅಸ್ಮಿತ, ಪ್ರಿನ್ಸಿ, ಮಾನಸ, ವಸಿಷ್ಠ ಮತ್ತು ಇನೋವೇಟರ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.