ವೇಗಿ ಮೊಹಮ್ಮದ್ ಶಮಿ ನಿಜಕ್ಕೂ ಆಸ್ಚ್ರೇಲಿಯಾ ತೆರಳ್ತಾರಾ? ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಬಾಯಿ ಬಿಡುತ್ತಿಲ್ಲ. ಆದರೆ ಶಮಿ ಚಲನವಲನಗಳನ್ನು ಗಮನಿಸಿದರೆ ಅವರಂತೂ ಪೂರ್ತಿ ಉತ್ಸಾಹದಲ್ಲಿ ಇದ್ದಂತೆ ತೋರುತ್ತಿದೆ. ಅವರ ಆಟ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ನೋಡಿದಾಗ ಅದು ಮನದಟ್ಟಾಗುತ್ತದೆ.
ಮೊಣಕಾಲಿನ ನೋವಿಗೆ ಚಿಕಿತ್ಸೆ ಪಡೆದ ಬಳಿಕ ಎನ್ ಸಿಎಯಿಂದ ರಣಜಿಗೆ ಧುಮುಕಿರುವ ಶಮಿ ಮೊದಲ ಪಂದ್ಯದಲ್ಲೇ ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ. ಆದರೆ ಆಸ್ಟ್ರೇಲಿಯಾಗೆ ಹಾರಲು ಇಷ್ಟೇ ಸಾಕೇ? ಸಾಲದು ಶಮಿಗೆ ಇನ್ನೂ ಪರೀಕ್ಷೆಗಳು ಕಾದಿವೆ. ಅಲ್ಲಿ ಕಾದು ಗೆದ್ದರಷ್ಟೇ ಮುಂದಿನ ಹಾದಿ ಎನ್ನುತ್ತಿವೆ ವರದಿಗಳು.
ತೂಕ ಇಳಿಕೆಗೆ ಬಗ್ಗೆ ನಿಗಾ: ಚಿಕಿತ್ಸೆಯ ಬಳಿಕ ಶಮಿ ಅವರ ದೇಹದ ತೂಕ ಹೆಚ್ಚಾಗಿದೆ.
ಹಾಗಾಗಿ ಬಿಸಿಸಿಐ ಮೆಡಿಕಲ್ ಟೀಂ ಮುಂದೆ ಶಮಿ ಅವರು ತಮ್ಮ ತೂಕ ಮತ್ತು ಫಿಟ್ನೆಸ್ ಎರಡನ್ನೂ ಸಾಬೀತು ಪಡಿಸಬೇಕಾದ ಅಗತ್ಯವಿದೆ. ಮೆಡಿಕಲ್ ತಂಡಕ್ಕೆ ಶಮಿ ಫಿಟ್ನೆಸ್ ಸಮ್ಮತವಾದಲ್ಲಿ ಮಾತ್ರ ಆಸ್ಟ್ರೇಲಿಯಾಗೆ ತೆರಳಲು ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ಹೇಳಲಾಗಿದೆ.ಶಮಿ ಅವರು ಬಂಗಾಳ ಪರ ರಣಜಿ ಪಂದ್ಯವನ್ನು ಆಡುತ್ತಿದ್ದ ವೇಳೆ ಬಿಸಿಸಿಐನ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಟ್ರೈನರ್ ನಿಶಾಂತ್ ಬರ್ದೋಯಿ ಅವರು ಶಮಿ ಫಿಟ್ನೆಸ್ ಮೇಲೆ ಗಮನ ಹರಿಸಿದ್ದರು.
ಒಂದು ವೇಳೆ ಅಂದುಕೊಂಡಂತೆ ನಡೆದರೆ ಶಮಿ ಅವರು ಡಿಸೆಂಬರ್ 14ರಿಂದ ಪ್ರಾರಂಭವಾಗುವ 3ನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಗಿ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.