ನೆಲಮಂಗಲ: ಪೂರ್ವ ಪ್ರಸಿದ್ಧ ಇತಿಹಾಸದೊಂದಿಗೆ ನೆಲೆಯಾಗಿ ನಿಂತಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಭ್ರಹ್ಮರಥೋತ್ಸವವು ಅದ್ದೂರಿಯಾಗಿ ನಡೆಯಿತು.ತ್ಯಾಮಗೊಂಡ್ಲು ಹೋಬಳಿಯ ತಡಸೀಗಟ್ಟ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ಲಕ್ಷ್ಮೀನರಸಿಂಹ ಸ್ವಾಮಿಯ ಭ್ರಹ್ಮರಥೋತ್ಸವ ಗ್ರಾಮಸ್ಥರು, ಭಕ್ತರು, ಜನಪ್ರತಿನಿಧಿಗಳು, ಮುಖಂಡರುಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಗುರುವಾರ ಮದ್ಯಾನ ಸಂಪನ್ನಗೊಂಡಿತು ಸಹಸ್ರಾರು ಭಕ್ತರು ಬಾಗಿಯಾಗಿ ದರ್ಶನ ಪಡೆದರು. ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರು ದಿನಗಳ ಕಾಲ ನಡೆಯುವ ವಾರ್ಷಿಕೋತ್ಸವದಲ್ಲಿ ಹೋಮ,ಗಣಪತಿ ಪೂಜೆ, ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಿತು.
ಪ್ರತಿ ವರ್ಷ ಜರುಗುವಂತೆ ಈ ವರ್ಷವೂ ಕೂಡ ಯಾವುದೇ ಅಡೆತಡೆಗಳಿಲ್ಲದೆ ಗ್ರಾಮಸ್ಥರು, ಹೊರಜಿಲ್ಲೆಯ ನಗರವಾಸಿಗಳು ಸುತ್ತಮುತ್ತಲಿನ ಸಾವಿರಾರು ಭಕ್ತರಗಳ ಸುಮ್ಮುಖದಲ್ಲಿ ಸ್ವಾಮಿಯನ್ನು ರಥದಲ್ಲಿ ಉತ್ಸವ ಮೂರ್ತಿಯನ್ನು ವಿರಾಜಮಾನವಾಗಿ ಕೂರಿಸಿ ಜಾತ್ರಾ ವಿದಾನಗಳಂತೆ ರಥವನ್ನು ರಾಹುಕಾಲದ ಮೂಚಿತವಾಗಿ ಎಳೆದು ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸುಕೊಟ್ಟು ಸಂಪನ್ನಗೊಳಿಸಿ ಮೂರು ದಿನದ ಜಾತ್ರೋತ್ಸವದ ಪ್ರಯುಕ್ತ ದೇಗುಲಕ್ಕೆ, ದೇವರಿಗೆ, ಉತ್ಸವಮೂರ್ತಿ ಹಾಗೂ ಪಲ್ಲಕ್ಕಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಯಿತು.
ಹೊರ ಜಿಲ್ಲೆ ಗ್ರಾಮಗಳಿಂದ ಉರಿ ಬಿಸಿಲಿನಲ್ಲಿ ಬಾಯಾರಿಕೆಯಿಂದ ಬಂದಂತ ಭಕ್ತರಿಗೆ ಗ್ರಾಮವಾಸಿಗಳು ಮನೆಯ ಬಾಗಿಲುಗಳಲ್ಲಿ ಮಜ್ಜಿಗೆ, ಪಾನಕಗಳನ್ನು ನೀಡಿ ಬಾಯಾರಿಕೆಯ ದಾಹವನ್ನು ನೀಗಿಸಿ ಜಾತ್ರೆಯನ್ನು ಹುರುಪುಗೊಳಿಸಿದರು. ಜಾತ್ರೆಯಲ್ಲಿ ದಿವಂಗತ ಡಾ:ಪುನೀತ್ ರಾಜ್ ಕುಮಾರ್ ಬಾವಚಿತ್ರದ ಕೆಳಗೆ ಓಂ ಶಕ್ತಿ ಆಂಬ್ಯಲೆನ್ಸ್ ಸರ್ವೀಸ್ ವತಿಯಿಂದ ರಕ್ತದಾನ ಮಹಾದಾನ ಎಂಬ ಶಿರ್ಷಿಕೆಯಡಿಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಮುನ್ನೆಚ್ಚರಿಕೆಯಾಗಿ ಮುಜುರಾಯಿ ಇಲಾಖೆ ಪೋಲೀಸ್ ವ್ಯವಸ್ತೆಯನ್ನು ಕಲ್ಪಿಸಿಕೊಟ್ಟ ಪರಿಣಾಮ ತ್ಯಾಮಗೋಂಡ್ಲು ಪೋಲೀಸ್ ಅಧಿಕಾರಿಗಳು ಸುಸಜ್ಜಿತವಾಗಿ ಟ್ರಾಪಿಕ್ ವ್ಯವಸ್ತೆ
ಯನ್ನು ನಿಯಂತ್ರಿಸಿ ಗ್ರಾಮದ ಹೊರಗಡೆಯೇ ವಾಹನಗಳ ಪಾರ್ಕಿಂಗ್ ಮಾಡಿಸಲಾಗಿತ್ತು. ತುರ್ತುಪರಿಸ್ತಿತಿಯ ಆಂಬ್ಯುಲೆನ್ಸ್ ವ್ಯವಸ್ತೆಯನ್ನು ಮಾಡಲಾಗಿ ಸ್ಥಳದಲ್ಲಿ ಒಂದು ಆಂಬ್ಯುಲೆನ್ಸ್ ನ್ನು ನಿಯೋಜನೆ ಮಾಡಿದ್ದರು.ಈ ಸಂದರ್ಭದಲ್ಲಿ ನೆಲಮಂಗಲದ ಮಾಜಿ ಶಾಸಕರಾದ ಡಾ: ಶ್ರೀನಿವಾಸ್ ಮೂರ್ತಿ, ಕಾರೆಹಳ್ಳಿ ಗುರುಪ್ರಕಾಶ್, ದೊಡ್ಡಬೇಲೆ ಪಂಚಾಯ್ತಿ ಅದ್ಯಕ್ಷರು ಹಾಗೂ ಗ್ರಾಮವಾಸಿಗಳು, ಮುಖಂಡರುಗಳು, ಸಾವಿರಾರು ಭಕ್ತರು ಬಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾದರು.