ಬೆಂಗಳೂರು: ನೆನ್ನೆಯ ದಿವಸ ಸಾಂಸ್ಕೃತಿಕ ನಗರಿ ಮೈಸೂರಿನ ಜಲದರ್ಶಿನಿ ವಸತಿಗೃಹದಲ್ಲಿ ಮೈಸೂರು ಮಹಾನಗರ ಮತ್ತು ಹಾಸನ, ಚಾಮರಾಜನಗರ ಜಿಲ್ಲೆ ಗಳಿಂದ ವಿಶ್ವಕರ್ಮ ಸಮಾಜದ ಹಿರಿಯಮುಖಂಡರ ಉಪಸ್ಥಿಯಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಮಹಾ ಒಕ್ಕೂಟವು ಬೆಂಗಳೂರು ಸಂಘಟನಾತ್ಮಕ ಸಭೆಯನ್ನು ಆಯೋಜಿಸಲಾಗಿತ್ತು.
ಮೈಸೂರಿನಲ್ಲಿ ಸುಧೀರ್ಘವಾಗಿ ವಿಶ್ವಕರ್ಮ ಸಂಘಟನೆಯ ಕುರಿತು ಚರ್ಚಿಸಿ, ಹೊಬಳಿ ,ತಾಲೂಕು, ಜಿಲ್ಲೆ,ಮಹಾನಗರ, ರಾಜಧಾನಿಯವರೆಗೂ ಸಂಘಟನೆಯು ಗಟ್ಟಿಗೊಳಿಸಿ ಸಾಮಾಜಿಕ ನ್ಯಾಯ ಪಡೆಯುವಲ್ಲಿ ಹಾಗೂ ಸಮಸಮಾಜದ ನಿರ್ಮಾಣದತ್ತ ನಮ್ಮ ಹೆಜ್ಜೆ ಇರಿಸಿ ಹಾಗೂ ಉಪಯುಕ್ತ ವಿಷಯಗಳ ಕುರಿತು ರಾಜ್ಯಧಗಯಕ್ಷರಾದ ವಿಜಯಕುಮಾರ ಪತ್ತಾರ ಕರೆ ನೀಡಿದರು ಹಾಗೂ ಮಾಹಿತಿ & ಸಲಹೆಗಳನ್ನು ಮೈಸೂರು ಭಾಗದ ಹಿರಿಯ ಸಮಾಜದ ಮುಖಂಡರಿಂದ ಪಡೆಯಲಾಯಿತು.
ಈ ಮಹಾ ಒಕ್ಕೂಟದ ಸಭೆಯನ್ನು ಪೂರ್ಣಚಂದ್ರ ತೇಜಸ್ವಿರವರ ಸಮ್ಮುಖದಲ್ಲಿ ಆಯೋಜಿಸಿ ಸಭೆಯನ್ನು ಯಶಸ್ವಿಗೊಳಿಸಲಾಯಿತು.ಮೈಸೂರು ಭಾಗದ ವಿಶ್ವಕರ್ಮ ಮುಖಂಡರುಗಳಾದ ರಘುನಾಥ ಆಚಾರ್, ,ಕಾಂತರಾಜು, ಮುರಳಿಧರ, ಹಾಸನ ವೆಂಕಟೇಶ, ಶಂಕರಚಾರ್ಯ ಸುರೇಶ ಗೋಲ್ಡ್, ಕೆಂಪರಾಜು, ಪ್ರಮೀಳರವರು ಲೋಕೇಶ ಅಚಾರ, ಇನ್ನುಳಿದ ಸಮಾಜ ಮುಖಂಡರು ಉಪಸ್ಥಿತರಿದ್ದರು..ಹಾಗೂ ವಿಶ್ವಕರ್ಮ ಮಹಾ ಒಕ್ಕೂಟದ ಮುಖಂಡರುಗಳು & ಗೌರವ ಅಧ್ಯಕ್ಷರಾದ ಸರ್ವೇಶ ಆಚಾರ್, ವೀರಣ್ಣ, ರಾಮಚಾರ್, ಮೋಹನ ಆಚಾರ್, ಅಧ್ಯಕ್ಷರಾದ ವಿಜಯಕುಮಾರ್ ಪತ್ತಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ನಗರಿ ಮೈಸೂರು ವಿಶ್ವಕರ್ಮ ಸರ್ವ ಮುಖಂಡರು ಸಭೆಯನ್ನು ಯಶಸ್ವಿಗೊಳಿಸಿ ನೂತನ ಒಕ್ಕೂಟಕ್ಕೆ ಶಕ್ತಿ ತುಂಬಿದರು.