ಹರಿದ್ವಾರೇ ಕುಬ್ಭಂಯೋಗೋ
ಮೇಷಾರ್ಕೇ ಕುಮ್ಭಾಗೇ ಗುರಾಯ|
ಪ್ರಯಾಗೇ ಮೇಷ ಸಂಸ್ಥೇಜ್ಯೇ ಮಕರಸ್ಥೇ ದಿವಾಕರೇ||
ಉಜ್ಜಯಿನ್ಯಾಂ ಚ ಮೇಷಾರ್ಕೇ ಸಿಂಹಸ್ಥೇ ಚಬೃಹಸ್ಪತೈ|
ಸಿಂಹಸ್ಥಿತೇಜ್ಯೇ ಸಿಂಹಾರ್ಕೇ ನಾಶಿಕೇ
ಗೌರಮೀತತೇ||
ಸುಧಾಬಿಂದುವಿನ ನಿಕ್ಷೇಪಾತ್ ಕುಂಭಪರ್ವೇತಿ ವಿಶೃತಮ್||
ಅರ್ಥ- ಗುರುವು ಕುಂಭರಾಶಿಗೆ ಪ್ರವೇಶಿಸಿದಾಗ ಸೂರ್ಯ ಮೇಷ ರಾಶಿಗೆ ಪ್ರವೇಶಿಸಿದಾಗ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತದೆ.ಮಾಘ ಅಮವಾಸ್ಯೆಯಂದು ಗುರುವು ಕುಂಭರಾಶಿಗೆ ಪ್ರವೇಶಿಸಿದಾಗ ಸೂರ್ಯ ಚಂದ್ರರು ಮಕರರಾಶಿಗೆ ಪ್ರವೇಶಿಸಿದಾಗ ಪ್ರಯಾಗದಲ್ಲಿ ಕುಂಭಮೇಳ ನಡೆಯುತ್ತದೆ.ಗುರುವು ಕುಂಭರಾಶಿಗೆ ಪ್ರವೇಶಿಸಿದಾಗ ಉಜ್ಜಯಿನಿಗೆ ಕುಂಭಮೇಳ ನಡೆಸುವ ಗೌರವ ಸಿಗುತ್ತದೆ.ಸೂರ್ಯ ಗುರು ರಾಶಿಚಕ್ರದ ಸಿಂಹರಾಶಿ ಪ್ರವೇಶಿಸಿದಾಗ ನಾಶಿಕ ತ್ರಯಂಬಕೇಶ್ವರದಲ್ಲಿ ಕುಂಬಮೇಳ ನಡೆಯುತ್ತದೆ.
ಕುಂಭಮೇಳ ಭೂಮಿಯ ಮೇಲಿನ ಅತ್ಯಂತ ದೊಡ್ಡ ಶಾಂತಿಯುತ ಯಾತ್ರಿಕರ ಸಭೆಯಾಗಿದ್ದು ಇದರಲ್ಲಿ ಭಾಗವಹಿಸುವವರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದನ್ನು ಶಾಹೀಸ್ನಾನವೆಂದೂ ಕರೆಯುತ್ತಾರೆ. ನದಿಯ ಸ್ನಾನದಿಂದ ಜನನ ಮರಣದ ಚಕ್ರದಿಂದ ಮುಕ್ತರಾಗುತ್ತಾರೆ ಎಂದು ಭಕ್ತರ ನಂಬಿಕೆಯಾಗಿದೆ. ಲಕ್ಷಾಂತರ ಜನರು ಯಾರ ಅಹ್ವಾಹನೆಯಿಲ್ಲದೇ ಈ ಸ್ಥಳ ತಲಪುತ್ತಾರೆ. ಸಭೆಯಲ್ಲಿ ತಪಸ್ವಿಗಳು, ಸಂತರು, ಸಾಧುಗಳು,ಆಕಾಂಕ್ಷಿಗಳು, ಕಲ್ಪವಾಸಿಗಳು, ಸಂದರ್ಶಕರು ಸೇರಿರುತ್ತಾರೆ.ಈ ಉತ್ಸವವನ್ನು ಅಲಹಾಬಾದ್, ಹರಿದ್ವಾರ, ಉಜ್ಜಯಿನಿ, ನಾಶಿಕಪ್ರತೀ ನಾಲ್ಕು ವರ್ಷಕ್ಕೊಮ್ಮೆ ಸರದಿಯಲ್ಲಿ ನಡೆಸಲಾಗುತ್ತದೆ.
ಜಾತಿ, ಧರ್ಮ, ಲಿಂಗವನ್ನು ಲೆಕ್ಕಿಸದೇ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಸಾಮಾನ್ಯ ಭಾರತೀಯರ ಮೇಲೆ ಮೆಸ್ಮೆರಿಕ್ ಪ್ರಭಾವ(ಸಮ್ಮೋಹಕ) ಬೀರುತ್ತದೆ. ಈ ಕಾರ್ಯಕ್ರಮವು ಖಗೋಳಶಾಸ್ತ್ರ, ಜೋತಿಷ್ಯ, ಅಧ್ಯಾತ್ಮಿಕತೆ, ಧಾರ್ಮಿಕ ಸಂಪ್ರದಾಯಗಳು, ಸಾಮಾಜಿಕ ಸಾಂಸ್ಕೃತಿಕ ಪದ್ಧತಿಗಳು ಆಚರಣೆಗಳು ವಿಜ್ಞಾನವನ್ನು ಒಳಗೊಂಡಿದೆ. ಭಾರತದ ವಿಭಿನ್ನ ನಾಲ್ಕು ನಗರಗಳಲ್ಲಿ ನಡೆಯುವದರಿಂದ ವಿಭಿನ್ನ ಸಾಮಾಜಿಕ ಸಂಸ್ಕೃತಿಕ ಚಟುವಟಿಕೆ ಒಳಗೊಂಡಿರುತ್ತದೆ. ಸಂಪ್ರದಾಯಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲಗಳನ್ನು ಪ್ರಾಚೀನ ಧಾರ್ಮಿಕ ಹಸ್ತಪ್ರತಿಗಳು, ಮೌಖಿಕ ಸಂಪ್ರದಾಯಗಳು, ಐತಿಹಾಸಿಕ ಪ್ರವಾಸ ಕಥನಗಳು, ಪ್ರಖ್ಯಾತ ಇತಿಹಾಸಕಾರರು ರಚಿಸಿದ ಪಠ್ಯಗಳ ಮೂಲಕ ರವಾನಿಸಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ: ಪ್ರಾಚೀನ ಹಿಂದೂ ದಂತಕಥೆಗಳ ಪ್ರಕಾರ ಸಮುದ್ರಮಂಥನ (ಸಾಗರ ಮಂಥನ) ಸಮಯದಲ್ಲಿ ದೇವರುಗಳು ರಾಕ್ಷಸರ ನಡುವೆ ಪವಿತ್ರ ಅಮೃತದ ಕುಂಭ ಅಥವಾ ಕಲಶಕ್ಕಾಗಿ ನಡೆದ ಸ್ವರ್ಗೀಯ ಯುದ್ಧದಲ್ಲಿ ವಿಷ್ಣು ಪವಿತ್ರ ಅಮೃತದ ಕೆಲವು ಹನಿ ಬೀಳಿಸಿದರು.ಆ ಹನಿಗಳು ನಾಲ್ಕು ಸ್ಥಳಗಳ ಮೇಲೆ ಬಿದ್ದವು.ಪ್ರಯಾಗರಾಜ,ಹರಿದ್ವಾರ,ನಾಶಿಕ ಮತ್ತು ಉಜ್ಜಯಿನಿ.ಅಂದಿನಿಂದ ಈ ಸ್ಥಳಗಳು ಕುಂಭಮೇಳ ಸ್ಥಳಗಳಾಗಿವೆ.ನಿರ್ದಿಷ್ಟ ಜ್ಯೋತಿಷ್ಯ ಲೆಕ್ಕಾಚಾರದ ಮೇಲೆ ಈ ಕುಂಭಸ್ಥಳಗಳು ಪ್ರತೀ ಹನ್ನೆರಡು ವರ್ಷಕೊಮ್ಮೆ ತಿರುಗುತ್ತವೆ.
ಕುಂಭಮೇಳದ ಇತರ ಹೆಸರುಗಳುಮಹಾ ಕುಂಭಮೇಳಪ್ರತೀ 12 ವರ್ಷಕ್ಕೊಮ್ಮೆ ಪ್ರಯಾಗದ ಗಂಗಾ,ಯಮುನಾ,ಸರಸ್ವತೀ ನದಿಗಳ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತದೆ.ಇದನ್ನು ಮಹಾಕುಂಭಮೇಳವೆಂದು ಕರೆಯುತ್ತಾರೆ.
ಅರ್ಧ ಕುಂಭಮೇಳಪ್ರತೀ ಆರು ವರ್ಷಕೊಮ್ಮೆ ನಡೆಯುವ ಕುಂಭಮೇಳ.ಸಿಂಹಸ್ಥ ಕುಂಭಮೇಳಉಜ್ಜಯಿನಿ, ತ್ರಯಂಬಕೇಶ್ವರ, ನಾಶಿಕದಲ್ಲಿ ನಡೆಯುವ ಕುಂಭಮೇಳ. ಗುರು ಒಬ್ಬನೇ ಸೂರ್ಯನೊಂದಿಗೆ ಸಿಂಹರಾಶಿಯಲ್ಲಿದ್ದಾಗ ಕುಂಭ ಮೇಳವನ್ನು ಸಿಂಹಸ್ಥ ಕುಂಭಮೇಳವೆಂದು ಕರೆಯುತ್ತಾರೆ.ಅಧ್ಯಾತ್ಮಿಕ ಮಹತ್ವ: ಕುಂಭಮೇಳವು ಸಾಂಸ್ಕೃತಿಕ, ಧಾರ್ಮಿಕ, ಅಧ್ಯಾತ್ಮಿಕ, ಐತಿಹಾಸಿಕ ದೃಷ್ಟಿಕೋನದ ಜೊತೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಮುಖ್ಯವಾಗಿದೆ.ಕುಂಭಮೇಳದ ಸಮಯದಲ್ಲಿ ನಿರ್ದಿಷ್ಟ ಗ್ರಹಸ್ನಾನದಿಂದಾಗಿ ಪರಿಸರದಲ್ಲಿ ಸೃಷ್ಟಿಯಾಗುವ ಪರಿಣಾಮಗಳು ಅಧ್ಯಾತ್ಮಿಕ ಅಭ್ಯಾಸ ಮತ್ತು ಧಾರ್ಮಿಕ ಆಚರಣೆಗಳಿಗೆ ಸಹಕಾರಿಯಾಗಿದೆ.ಈ ಉದ್ದೇಶಕ್ಕಾಗಿ ಋಷಿಗಳು,ಭಕ್ತರು,ಕುಂಭಮೇಳದ ಸ್ಥಳಗಳಿಗೆ ಬೇಟಿ ನೀಡುತ್ತಾರೆ.ನದಿಯ ಸ್ನಾನ ,ದೇವತೆಗಳ ಪೂಜೆ,ಪಿತೃತರ್ಪಣ,ಶ್ರದ್ಧಾಯಜ್ಞಯಾಗ ,ದಾನನೀಡುವದು ,ಧ್ಯಾನ ತಪಸ್ಸು,ಅಧ್ಯಾತ್ಮಿಕ ಅಭ್ಯಾಸದಂತಹ ಧಾರ್ಮಿಕ ಆಚರಣೆ ಮಾಡುತ್ತಾರೆ.
ಭಕ್ತರ ವ್ಯಾಪಕ ವ್ಯಾಪ್ತಿ:
ಪ್ರಯಾಗದ ಕುಂಭಮೇಳದಲ್ಲಿ ಕನಿಷ್ಠ 5 ಕೋಟಿ ಭಕ್ತರು ಸ್ನಾನ ಮಾಡುತ್ತಾರೆ.ಈ ಕುಂಭಮೇಳದಲ್ಲಿ ಭಾಗವಹಿಸುವ ಸಂಖ್ಯೆ ಗಿನ್ನೇಸ ಬುಕ್ ಆಫ್ ವಲ್ಡ ರಿಕಾರ್ಡನಲ್ಲಿ ದಾಖಲಾಗಿದೆ. ಈ ಸಮಯದಲ್ಲಿ ದರ್ಶನವು ಭಕ್ತರ ಕಣ್ಣಿಗೆ ರಮಣೀಯ ಅನುಭವ ನೀಡುತ್ತದೆ.ಧರ್ಮ, ಅಧ್ಯಾತ್ಮಿಕತೆ, ರಾಮಾಯಣ,ಮಹಾಭಾರತ ಕುರಿತು ಪ್ರವಚನ, ಉಪನ್ಯಾಸ, ಭಕ್ತರ ಕಿವಿಗೆ ಸ್ಪೂರ್ತಿದಾಯಕ ಅನುಭವ ನೀಡುತ್ತವೆ.