ಬೆಂಗಳೂರು: ಬೆಂಗಳೂರಿನ ಜನಪ್ರಿಯ ಶಿಕ್ಷಣ ಸಂಸ್ಥೆಯಾಗಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ಅಂತರ್-ಕಾಲೇಜು ಸಾಂಸ್ಕೃತಿಕ ಉತ್ಸವ `ಕ್ರೆಸಿಂಡೋ 2024’ಕ್ಕೆ ನವೆಂಬರ್ 22ರ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು. 22ರಿಂದ 2 ದಿನಗಳ ಕಾಲ `ಕಲಾ ಸಂಗ್ರಾಮ’ ಎಂಬ ಥೀಮ್ ನೊಂದಿಗೆ ಈ ಸೃಜನಶೀಲ ಮತ್ತು ಪ್ರತಿಭಾನ್ವೇಷಣೆಯ ಉತ್ಸವ ನಡೆಯಲಿದೆ.
ಈ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಮ್ಯಾನೇಜ್ಮೆಂಟ್ ಉತ್ಸವವು ಬೆಂಗಳೂರಿನಾದ್ಯಂತದ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ತಂದು, ಅವರೊಳಗಿನ ಅದ್ಭುತ ಪ್ರತಿಭೆಗಳನ್ನು ಬೆಳಕಿಗೆ ತರಲಿದೆ.ಗಂಧದಗುಡಿಯಂಥ ಜನಪ್ರಿಯ ಸಾಕ್ಷ್ಯಚಿತ್ರದ ನಿರ್ದೇಶಕರೂ ಆಗಿರುವ ಖ್ಯಾತ ಕಥೆಗಾರ, ಸಿನಿಮಾ ನಿರ್ಮಾಪಕ,
ವನ್ಯಜೀವಿ ಛಾಯಾಚಿತ್ರಗ್ರಾಹಕ ಶ್ರೀ. ಅಮೋಘವರ್ಷ ಅವರು `ಕ್ರೆಸಿಂಡೋ 2024’ರ ಉದ್ಘಾಟನಾ ಸಮಾರಂಭದಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ ಅವರುಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಹುಲಿ ಮತ್ತು ಆನೆಗಳಂಥ ವನ್ಯಜೀವಿಗಳಿಗೆ ಕರ್ನಾಟಕವು ತವರಾಗಿದ್ದು, ಇಂಥ ವನ್ಯಸಂಪತ್ತು ಹೊಂದಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿಂಧಿ ಮಹಾವಿದ್ಯಾಲಯದ ಅಧ್ಯಕ್ಷರಾದ ಆಶಿμï ಅಮರ್ ಲಾಲ್, ಕಾರ್ಯದರ್ಶಿಗಳಾದ ಕಿರಣ್ ಎಸ್. ಚಾವ್ಲಾ, ಪ್ರಾಂಶುಪಾಲರಾದ ಡಾ.ಎನ್. ಆಶಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕಲಾಸಂಗ್ರಾಮ್ ತಂಡವು ಭರತನಾಟ್ಯ. ಕೂಚಿಪುಡಿ, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿತು.
ಕಳೆದ 20 ವರ್ಷಗಳಿಂದಲೂ ಸಿಂಧಿ ಮಹಾ ವಿದ್ಯಾ ಲಯವು ವಾರ್ಷಿಕ ಕಲಾ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷವೂ ಬೆಂಗಳೂರಿನ ಮೂಲೆ ಮೂಲೆಗಳ ಸಾವಿರಾರು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷವೂ ಎರಡು ದಿನಗಳ ಕಾಲ ಕಲಾಸಂಗ್ರಾಮ ಥೀಮ್ ನಡಿ ಕ್ರೆಸಿಂಡೋ ಉತ್ಸವ ನಡೆಯುತ್ತಿದ್ದು, ನಗರದ 150ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ನವೆಂಬರ್ 23ರ ಶನಿವಾರ ಕ್ರೆಸಿಂಡೋ 2024ರ ಸಮಾರೋಪ ಸಮಾರಂಭ ನಡೆಯಲಿದೆ.