ಬೆಳಗಾವಿ: ರಾಜ್ಯ ಹಾಗೂ ರಾಷ್ಟ್ರದಲ್ಲಿ ವಿದ್ಯೆ, ವಸತಿ, ದಾಸೋಹಕ್ಕೆ ಹೆಸರುವಾಸಿಯಾಗಿರುವ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸುಮಾರು 70 ಲಕ್ಷ 31 ಸಾವಿರದ 438 ರೂಪಾಯಿಗಳ ವಿದ್ಯುತ್ ಬಿಲ್ ನೀಡಿರುವುದು ಇದೀಗ ವಿವಾದಕ್ಕೆ ಗ್ರಾಸವಾಗಿದೆ.
ದುಬಾರಿ ವಿದ್ಯುತ್ ಬಿಲ್ ನೀಡಿರುವ ಕ್ರಮವನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಖಂಡಿಸಿದ್ದು ಮಠಗಳಿಗೆ ಜನ ಕೊಡುವ ಪರಂಪರೆ ಇದೆ ಹೊರತು ಅವರಿಂದ ಕಸಿಯುವುದಲ್ಲ. ಸರ್ಕಾರಕ್ಕೆ ಇಷ್ಟೊಂದು ದುರ್ಗತಿ ಬಂದಿದೆಯೇ.ಬಿಕಾರಿಗಳಾಗಿದ್ದಾರೆ ಎಂದು ಪ್ರಶ್ನಿಸಿರುವ ಅವರು ಬಿಲ್ ನೀಡಿರುವ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ತಮ್ಮ ಗಮನಕ್ಕೆ ಈ ವಿಷಯ ಬಂದಿದೆ ಎಂದು ಪ್ರತಿಕ್ರಿಯಿಸಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡಲೇ ವಿದ್ಯುತ್ ಬಿಲ್ ಅನ್ನು ವಾಪಸ್ ಪಡೆಯುವುದಾಗಿ ಇಲಾಖೆಯ ಸಿಇಒ ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.