ಮೈಸೂರು: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ನಿನ್ನೆ ನಿಧನರಾಧ ಹಿರಿಯ ಮುತ್ಸದ್ದಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೃಷ್ಣ ಅವರ ಅವರ ಅಂತ್ಯಕ್ರಿಯೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಮಂತ್ರಿಮಂಡಲದ ಹಲವಾರು ಸ್ಥಳದಲ್ಲಿ ಹಾಜರಿದ್ದು ಅತ್ಯಂತ ಜಬಾಬ್ದಾರಿಯುವಾಗಿ ಏರ್ಪಾಟುಗಳನ್ನು ಮಾಡಿದರು. ಕೃಷ್ಣ ಅವರನ್ನು ಗೌರವಯುತವಾಗಿ ಸರ್ಕಾರೀ ಮರ್ಯಾದೆಯೊಂದಿಗೆ ವಿದಾಯ ಹೇಳಿದ ಸಿದ್ದರಾಮಯ್ಯ ಸರ್ಕಾರಕ್ಕೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ವಿಶ್ವನಾಥ್ ಹೇಳಿದರು.