ಬೆಂಗಳೂರು: ಕರ್ನಾಟಕದ ಸೆಂಟ್ರಲೈಟ್ಸ್ ನಿವೃತ್ತ ಉದ್ಯೋಗಿಮಿತ್ರ ಸಂಸ್ಥೆಯು ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ 114ನೇ ವಾರ್ಷಿಕೋತ್ಸವವನ್ನು ಡಿಸೆಂಬರ್ 21, 2024 ರಂದು ಬೆಂಗಳೂರಿನ ಹೋಟೆಲ್ ಸಾಮ್ರಾಟ್ ರೆಸಿಡೆನ್ಸಿ ಸಭಾಂಗಣದಲ್ಲಿ ವಿಶಿಷ್ಠ ರೀತಿಯಲ್ಲಿ ಆಚರಿಸಲಿದೆ.
ಈ ವಾರ್ಷಿಕೋತ್ಸವನ್ನು ಎಸ್-ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಮಂಜುನಾಥ ಶರ್ಮರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಕೆ ಪಾರ್ಥಸಾರಥಿ ನಾಯ್ಡುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟ್ರಲೈಟ್ಸ್ ನಿವೃತ್ತ ಉದ್ಯೋಗಿಮಿತ್ರ ಸಂಸ್ಥೆಯ ಮುಖ್ಯ ಪದಾಧಿಕಾರಿಗಳಾದ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ಬಿ ಎನ್ ಎಸ್ ರತ್ನಾಕರ್ ರವರು ತಿಳಿಸಿದರು.
ಸರ್ ಸೊರಾಬ್ಜಿ ಪೋಚ್ಖಾನವಾಲಾ ರವರಿಂದ 21 ಡಿಸೆಂಬರ್ 1911 ರಂದು ಒಂದು ಶಾಖೆಯಿಂದ ಪ್ರಾರಂಭವಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಇಂದು ಹೆಮ್ಮರವಾಗಿ ಬೆಳೆದು, ಭಾರತಾದ್ಯಂತ ಸೆಪ್ಟೆಂಬರ್ 2024 ಗೆ ಇದ್ದಂತೆ 4528 ಶಾಖೆಗಳೊಂದಿಗೆ 6.44 ಲಕ್ಷ ಕೋಟಿ ವ್ಯವಹಾರವನ್ನು ಹೊಂದಿದೆ ಎಂದು ಶ್ರೀ ಬಿ ಎನ್ ಎಸ್ ರತ್ನಾಕರ್ ವಿವರಿಸಿದರು.