ಬೆಂಗಳೂರು: ಹೊಸ ವರ್ಷಾಚರಣೆ ದಿನವಾದ 31ರ ರಾತ್ರಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ನಗರ ಪೊಲೀಸ್ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚಿಸಿದ್ದಾರೆ.18ನೇ ಪೊಲೀಸ್ ಆಯುಕ್ತರ ಮಾಸಿಕ ಪೆರೇಡ್ನಲ್ಲಿ ಭಾಗವಹಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಮುಂಬರುವ ಹೊಸ ವರ್ಷದ ದಿನಾಚರಣೆಗೆ ಸಂಬಂಧಪಟ್ಟ ಹಾಗೆ ನಗರದ ಎಲ್ಲಾ ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ ಮತ್ತು ಡಿಸಿಪಿ ಸೂಚನೆ ನೀಡಿದರು.
ಹೊಸ ವರ್ಷದ ಪ್ರಯುಕ್ತ ರಸ್ತೆಗಳಲ್ಲಿ ಹಾಗೂ ಹೋಟೆಲ್ಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಮಹಿಳೆಯರ ಸುರಕ್ಷಿತೆಗೆ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.ವಿಶೇಷವಾಗಿ ಡ್ರಗ್ಸ್ ಬಳಸುವುದು, ಮಹಿಳೆಯರನ್ನು ಚುಡಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುವುದು ಹಾಗೂ ಇನ್ನೂ ಇತರೆ ಸಮಾಜಘಾತಕ ಕೆಲಸಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.
ಕಾರ್ಯಕ್ರಮ ನಿಯೋಜಿಸುವ ಹೋಟೆಲ್ ಮಾಲೀಕರುಗಳನ್ನು ಅಥವಾ ಮ್ಯಾನೇಜರ್ ಗಳನ್ನು ಕರೆದು ಸಭೆ ನಡೆಸಬೇಕೆಂದು ತಿಳಿಸಿದ್ದಾರಲ್ಲದೆ ಮತ್ತು ವಿಶೇಷವಾಗಿ ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಬೇಕೆಂದು ತಿಳಿಸಿದರು.ಅಂದಾಜು 5000 ಪೊಲೀಸರನ್ನು ವಿಶೇಷ ಕಾರ್ಯಕ್ರಮಕ್ಕೆ ಅಂದು ರಾತ್ರಿ ನಿಯೋಜಿಸಲಾಗುವುದು. ಸಂಚಾರಿ ಪೊಲೀಸರಿಗೆ ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದ್ಯಂತ ಅಂದು ವಿಶೇಷವಾಗಿ ಕೆಲವು ಕಡೆ ನಾಕ ಬಂದಿಯನ್ನು ಸಹ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಕವಾಯಿತಿನಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ಸಹ ನೀಡಿ ಅಭಿನಂದಿಸಿದರು.
ಕವಾಯಿತಿನ ನೇತೃತ್ವ ವಹಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಸಜಿತ್ ರವರನ್ನು ಮತ್ತು ಅವರ ತಂಡವನ್ನು ಉತ್ತಮ ಕವಾಯಿತು ಪ್ರದರ್ಶನ ನೀಡಿದ್ದಕ್ಕಾಗಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಡಿಸಿಪಿಗಳು ಹಾಗೂ ಎಲ್ಲ ಎಸಿಪಿ ವರ್ಗದವರು ಉಪಸ್ಥಿತರಿದ್ದರು.