ನವದೆಹಲಿ: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ತಾರಾ ಶೂಟರ್ ಮನು ಭಾಕರ್ ಅವರ ಸಾಧನೆಯ ಹಸಿವು ಇನ್ನೂ ತಣಿದಿಲ್ಲ.
ಇಂದು ನಡೆಯುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ.ಈ ಮೂಲಕ ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ.
25 ಮೀಟರ್ ಪಿಸ್ತೂಲ್ ಶೂಟಿಂಗ್, ಮನು ಭಾಕರ್ ಅವರ ನೆಚ್ಚಿನ ಸ್ಪರ್ಧೆಯಾಗಿದೆ.
ಈ ವಿಭಾಗದಲ್ಲಿ ಈಗಾಗಲೇ ಅವರು ವಿಶ್ವ ಚಾಂಪಿಯನ್ಶಿಪ್ ಕೂಟದಲ್ಲಿ 1 ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಶಿಸ್ತುಬದ್ಧವಾಗಿ ಸಾಮರ್ಥ್ಯ ಪ್ರದರ್ಶಿಸುವ ಅವರು ಪದಕ ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ಗೆದ್ದರೆ ಭಾರತದ ಪರ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.