ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೨೪ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಬಗೆಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಾದಕ ವಸ್ತು ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಈ ಹಿಂದೆ ಬಂಧಿಸಿದರು.
ಈ ಹಿಂದೆ ಈ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡಿದ್ದAತಹ ಹೈಡ್ರೋಜ ಗಾಂಜಾ, ಹೆರಾಯಿನ್, ಎಂ ಡಿ ಎಂ ಎ ಹಾಗೂ ಇನ್ನು ಇತರೆ ಮಾದಕ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಇಂದು ದಾಬಸ್ ಪೇಟೆಯಲ್ಲಿರುವ ರಾಮ್ ಕೀ ಕಾರ್ಖಾನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಬಾಬಾ ರವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ನಾಶಪಡಿಸಲಾಯಿತು. ಈ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳ ಅಂದಾಜು ಮೌಲ್ಯ ೫ ಕೋಟಿಗಳಾಗಿರುತ್ತವೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಬಾಬಾ ತಿಳಿಸಿರುತ್ತಾರೆ.