ಆಸ್ಟ್ರೇಲಿಯಾ ವಿರುದ್ಧ ಕೇವಲ ೭೭ ಎಸೆತಗಳಲ್ಲಿ ಶತಕ ಬಾರಿಸಿದ ಭಾರತ ತಂಡದ ಉಪನಾಯಕಿ ಸ್ಮ್ರತಿ ಮಂದಾನ ಅವರು ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದ್ದಾರೆ. ಆರಂಭಿಕರಾಗಿ ಕ್ರೀಸಿಗಿಳಿದು ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಸುಝಿ ಬೇಟ್ಸ್ ಮತ್ತು ಟಾಮಿ ಬ್ಯೂಮ್ಯಾಂಟ್ ಅವರ ಸಾಲಿಗೆ ಸೇರಿದ್ದಾರೆ. ಇನ್ನೊಂದು ಶತಕ ಹೊಡೆದರೆ ಅವರು ಈ ಪಟ್ಟಿಯಲ್ಲಿ ಒಂದನೇ ಸ್ಥಾನಕ್ಕೇರಲಿದ್ದಾರೆ. ಒಟ್ಟಾರೆ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕಗಳ ವಿಶ್ವದಾಖಲೆ ನಿರ್ಮಾಣಕ್ಕೆ ಅವರಿಗೆ ಇನ್ನು ಮೂರು ಶತಕಗಳ ಅಗತ್ಯವಿದೆ.
ಚಂಡೀಗಢದ ಮಹಾರಾಜ ಯಾದವೀಂದ್ರ ಸಿAಗ್ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅವರು ತಮ್ಮ ಏಕದಿನ ವೃತ್ತಿಜೀವನದ ೧೨ನೇ ಶತಕವನ್ನು ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ೪೯.೫ ಓವರ್ ಗಳಲ್ಲಿ ೨೯೨ ರನ್ ಕಲೆ ಹಾಕಿತು. ಆರಂಭಿಕ ಆಠಗಾರ್ತಿ ಸ್ಮತಿ ಮಂಧನಾ ಕೇವಲ ೭೭ ಎಸೆತಗಳಲ್ಲಿ ಶತಕ ಗಳಿಸಿದರು. ಒಟ್ಟಾರೆ ಅವರು ೯೧ ಎಸೆತಗಳಿಂದ ೧೪ ಬೌಂಡರಿ ಮತ್ತು ೪ ಸಿಕ್ಸರ್ ಗಳಿದ್ದ ೧೧೭ ರನ್ ಗಳಿಸಿ ಔಟಾದರು.
ಆಸ್ಟ್ರೇಲಿಯಾ ವಿರುದ್ಧ ಮಂದಾನ ಹೊರತುಪಡಿಸಿ ಬೇರೆ ಯಾವ ಬ್ಯಾಟರ್ ಸಹ ಅರ್ಧಶತಕವನ್ನೂ ಗಳಿಸಲು ಶಕ್ತವಾಗಲಿಲ್ಲ. ದೀಪ್ತಿ ಶರ್ಮಾ ೪೦(೫೩), ರಿಚಾ ಗೋಷ್ ೨೯(೩೩), ಪ್ರತಿಕಾ ರಾವಲ್ ೨೫(೩೨) ಉತ್ತಮ ಕೊಡುಗೆ ನೀಡಿದರು. ಆಸ್ಟ್ರೇಲಿಯಾ ಪರ ಜಾರ್ಸಿ ಬೌನ್ ಅವರು ೩ ವಿಕೆಟ್ ಮತ್ತು ಆ್ಯಶ್ಲೆ ಗಾರ್ಡ್ನರ್ ೨ ವಿಕೆಟ್ ಎಗರಿಸಿದರು. ಭಾರತದ ಪರವಾಗಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಇದು ಎರಡನೇ ಅತಿ ವೇಗದ ಶತಕವಾಗಿದೆ. ಈ ವರ್ಷದ ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ಅವರೇ ೭೦ ಎಸೆತಗಳಲ್ಲಿ ಶತಕ ಗಳಿಸಿದ್ದು ವೇಗದ ಶತಕವಾಗಿದೆ. ಮಂದನಾ ಅವರ ಎಲ್ಲಾ ೧೨ ಏಕದಿನ ಶತಕಗಳು ಆರಂಭಿಕ ಆಟಗಾರ್ತಿಯಾಗಿ ಬಂದಿವೆ.
ಇದು ಸ್ಮöÈತಿ ಮಂದಾನ ಅವರು ಈ ವರ್ಷ ಹೊಡೆಯುತ್ತಿರುವ ಮೂರನೇ ಏಕದಿನ ಶತಕವಾಗಿದೆ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಎರಡು ಬೇರೆ ಬೇರೆ ವರ್ಷಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಗೌರವಕ್ಕೂ ಅವರೀಗ ಪಾತ್ರರಾಗಿದ್ದಾರೆ. ೨೦೨೪ ರಲ್ಲಿ ಅವರು ನಾಲ್ಕು ಶತಕಗಳನ್ನು ಗಳಿಸಿದ್ದರು. ಈ ಶತಕದೊಂದಿಗೆ ಮಂಧನಾ ಅವರು ಮೆಗ್ ಲ್ಯಾನಿಂಗ್ ಅವರ ಅತಿ ಹೆಚ್ಚು ಶತಕಗಳ ದಾಖಲೆಗೆ ಹತ್ತಿರವಾಗಿದ್ದಾರೆ. ಲ್ಯಾನಿಂಗ್ ೧೫ ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.