ದೊಡ್ಡಬಳ್ಳಾಪುರ : ಡಾ.ಡಿ.ಆರ್. ನಾಗರಾಜ್ ಬಳಗ, ದೊಡ್ಡಬಳ್ಳಾಪುರ ಹಾಗೂ ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳು, ಕೊಡಿಗೇಹಳ್ಳಿ ದೊಡ್ಡಬಳ್ಳಾಪುರ ಇವರ ಸಹಯೋಗದಲ್ಲಿ ‘ಕಲಾ ತಪಸ್ವಿ ಶ್ರೀ ರುಮಾಲೆ ಚನ್ನಬಸವಯ್ಯ’ ನವರ ೧೧೫ನೇ ಜನ್ಮದಿನದ ಪ್ರಯುಕ್ತ ಪಿ.ಯು.ಸಿ. ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ದಿನಾಂಕ. ೧೭.೦೯.೨೦೨೫ ರಂದು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು.
ರುಮಾಲೆ ಚನ್ನಬಸವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಯ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ ರಾಕೇಶ್ ಜೆ.ಆರ್. ರವರು ರುಮಾಲೆ ಚನ್ನಬಸವಯ್ಯನವರ ಮೇರು ವ್ಯಕ್ತಿತ್ವವನ್ನು
ನೆನೆದು ಈ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಿದ ಡಾ.ಡಿ.ಆರ್. ನಾಗರಾಜ್ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತಾ ಇಂತಹ ಉತ್ತಮ ಕೆಲಸಗಳಿಗೆ ತಮ್ಮ ಸಂಸ್ಥೆಯ ಬೆಂಬಲ ಸದಾ ಇರುತ್ತದೆ. ಇದೇ ರೀತಿ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಿ, ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ತಿಳಿಸಿ ವಿಜೇತರಿಗೆ ನಗದು ಬಹುಮಾನವನ್ನು ಸಹ ಘೋಷಿಸಿದರು.
ಆರ್.ಎಲ್.ಜೆ.ಐ.ಟಿ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೆ.ಆರ್. ರವಿಕಿರಣ್ ಅವರು ರುಮಾಲೆ ರವರ ಬಹುಮುಖಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟು ಅವರು ರಚಿಸಿದ ಚಿತ್ರವು ಇಂಗ್ಲೆAಡಿನ ಬಂಕಿAಗ್ ಹ್ಯಾಮ್ ಅರಮನೆಯಲ್ಲಿ ಇರುವ ಸ್ವಾರಸ್ಯಕರ ವಿಷಯವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್.ಎಲ್.ಜೆ.ಐ.ಟಿ. ಗವರ್ನಿಂಗ್ ಕೌನ್ಸಿಲ್ನ ಉತ್ತಮ್ ಕುಮಾರ್, ಆರ್.ಎಲ್.ಜೆ.ಐ.ಟಿ. ಡೀನ್ ಡಾ.ಶ್ರೀನಿವಾಸ ರೆಡ್ಡಿ, ಸ್ಥಳೀಯ ಚಿತ್ರ ಕಲಾವಿದರಾದ ದೀಪಾ ನರೇಂದ್ರ, ಪವನ್ ಧನಂಜಯ, ಡಾ.ಡಿ.ಆರ್.ಬಳಗದ ಸಂಚಾಲಕರಾದ ಇಂ.ಹೇಮAತ್ ಲಿಂಗಪ್ಪ, ಡಾ.ಪ್ರಕಾಶ್ ಮಂಟೇದ, ಲಕ್ಷಮ್ಮ ಹಾಗೂ ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ತೀರ್ಪುಗಾರರ ಪರಿಶೀಲನೆಯ ನಂತರ ರಚನೆಯಾದ ಚಿತ್ರಗಳ ಸಾರ್ವಜನಿಕ ಪ್ರದರ್ಶನಹಾಗೂ ಸಮಾರಂಭ ಏರ್ಪಡಿಸಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಡಿ.ಆರ್.ನಾಗರಾಜ್ ಬಳಗವು ತಿಳಿಸಿದೆ.