ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃ ದ್ಧಿ ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿರವರು. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗುಂಡುತೋಪು ಗ್ರಾಮದಲ್ಲಿ ನಡೆದ ಅಂಗನವಾಡಿ ಬಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು,ಬುನಾದಿ ಪೂಜೆ ಮಾಡಿಮಾತ ನಾಡಿದರು.
ತಾಲ್ಲೂಕಿನ ಪರುಶುರಾಂಪುರ ಹೋಬಳಿಯ ಪರುಶು ರಾಂಪುರದ ಗುಂಡುತೋಪು ಗ್ರಾಮದಲ್ಲಿ,2022-23 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ,ಅಂದಾಜು ಒಟ್ಟು 23.00ಲಕ್ಷ ರೂಗಳ ಅನುದಾನದಲ್ಲಿ ನಡೆದ ಅಂಗನವಾಡಿ ಬಿ ಕೇಂದ್ರದ ಶಂಕುಸ್ಥಾಪನಾ ಕಾರ್ಯಕ್ರ ಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಶ್ರೀಮತಿ ಕಾವ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗಲೂರುಸ್ವಾಮಿ, ಉಪಾಧ್ಯಕ್ಷರಾದ ಸರೋಜಮ್ಮ, ಸದಸ್ಯರುಗಳು, ತಾಲ್ಲೂಕು ಕೆ.ಡಿ.ಪಿ ನಾಮ ನಿರ್ದೇಶನ ಸದಸ್ಯರಾದ ಬಸವರಾಜ್, ಮುಖಂಡರುಗಳಾದ ಚನ್ನಕೇಶವ, ಜಯವಿರಾಚಾರಿ, ಕೃಷ್ಣಪ್ಪ, ರುದ್ರೇಶ್, ಬೊಮ್ಮಕ್ಕ, ಮಂಜುಳಮ್ಮ, ಪ್ರಕಾಶ್, ನಾಗಭೂಷಣ, ಕರಿಯಣ್ಣ, ಮುಖಂಡರು ಕಾರ್ಯ ಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.