ಮಳವಳ್ಳಿ: ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಮಳವಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಸಹಾಯಕ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ ನೇತೃತ್ವದಲ್ಲಿ ರಾಷ್ಟ್ರೀಯಹೆದ್ದಾರಿಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು, ಈ ವೇಳೆ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು ಮಾತನಾಡಿ ಹಲಗೂರು ಮೂಲಕ ಗೊಲ್ಲರಹಳ್ಳಿ ಗ್ರಾಮ, ಬ್ಯಾಡರಹಳ್ಳಿ, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದಮುತ್ತತ್ತಿಗೆ ಪ್ರಯಾಣಿಸುವ ವೇಳೆ ಸಿಗುವ ಹೆದ್ದಾರಿ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಹಲವು ಪ್ರಾಣ ಹಾನಿಯಾಗಿದೆ.
ಇನ್ನೂ ಎರಡು ತಿಂಗಳೊಳಗೆ ಅಂಡರ್ ಪಾಸ್ ಅಥವಾ ಮೇಲೆಸೇತುವೆ ನಿರ್ಮಿಸಬೇಕು ಅಲ್ಲಿಯವರೆಗೂ ರಕ್ಷಣಾ ಗಾರ್ಡ್ಗಳನ್ನು ಆ ಸ್ಥಳದಲ್ಲಿ ನೇಮಿಸಬೇಕು, ಅಪಘಾತಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕು, ಹೆದ್ದಾರಿ ನಿರ್ಮಿಸಲು ಅನುಸರಿಸುವ ನಿಯಮಗಳನ್ನು ಈಗಾಗಲೇ ಉಲ್ಲಂಘಿಸಿದ್ದು, ಅದನ್ನು ಜಾರಿಗೊಳಿಸಬೇಕು, ಕಳಪೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು ಕಾರಣರಾದವರ ಮೇಲೆ ಕ್ರಮ ವಹಿಸಿಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ಹನುಮೇಶ್, ಆನಂದ್, ರಾಮಣ್ಣ, ಲಕ್ಷ್ಮಿಗೊಲ್ಲರಹಳ್ಳಿ, ಪುಟ್ಟತಾಯಮ್ಮ ಸೇರಿದಂತೆ ಹಲವರು ಇದ್ದರು.