6ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ 2024 ಥೈಲ್ಯಾಂಡ್ ಯೋಗ ಯೂಥ್ ಫೆಡರೇಶನ್ (ರಿ) ಮತ್ತು ಅಂತರಾಷ್ಟ್ರೀಯ ಯೋಗ ಯೂತ್ ಫೆಡರೇಷನ್ (ರಿ) ಇವರ ಸಹಯೋಗದೊಂದಿಗೆ ವರ್ಷಿಣಿ ಯೋಗ ಎಜುಕೇಶನ್ ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಶಿವಮೊಗ್ಗ ಇವರು 9.12.2024 ರಂದು ಥೈಲ್ಯಾಂಡ್ನ ಪಟ್ಟಾಯದಲ್ಲಿ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದರು.
ಈ ಯೋಗಾಸನ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ನಗರದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯ ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೀರ್ತನ ಬಿ.ಎಂ 11-15 ವರ್ಷದ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ (ಬೆಳ್ಳಿ ಪದಕ) ಪುನೀತ್ ಕೊಂಗಾಡಿ ಎನ್ 11-15 ವರ್ಷದ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ( ಕಂಚಿನ ಪದಕ ) ಕೀರ್ತನ ಬಿ.ಎಸ್ 8-10 ವರ್ಷದ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ( ಬೆಳ್ಳಿ ಪದಕ) ಮತ್ತು ರೋಜಿಪುರದ ಚಿನ್ನರ ಕೂಟ ವಿದ್ಯಾರ್ಥಿಯಾದ ರಾಧಾ ಸ್ವರೂಪ್ .ಎಸ್ 11-15 ವರ್ಷದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಂತರಾಷ್ಟ್ರೀಯ ಯೋಗ ತರಬೇತಿದಾರರಾದ ವಿನೋದ್ ಕುಮಾರ್ ಎಸ್, ನವ್ಯಶ್ರೀ ಎಂ.ಕೆ ಮತ್ತು ಜಯಭಾರತಿ ಅರವಿಂದ್ ರವರು ಅಭಿನಂದಿಸಿದ್ದಾರೆ.