ಮೈಸೂರು; ತನ್ನ ಅಕ್ಕನನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಂದ ಬಾವನನ್ನು ಬಾಮೈದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೆಚ್ಡಿಕೋಟೆಯಲ್ಲಿ ನಡೆದಿದೆ.
ಹೆಚ್ಡಿಕೋಟೆಯ ಹನುಂತನಗರದಲ್ಲಿ ಮಧುರ ಎಂಬಾಕೆಯನ್ನು ಆಕೆಯ ಪತಿ ಮಲ್ಲೇಶ್ ನಾಯ್ಕ ಎಂಬಾತ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದ ಗಾಯಗೊಂಡಿದ್ದ ಆಕೆಯನ್ನು ಮೈಸೂರಿನ ದಟ್ಟಗಳ್ಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಮಧುರ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಮಲ್ಲೇಶ್ ನಾಯಕನ ಬಾಮೈದ ಶೇಖರ್ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.