ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿಯ ಉದ್ಯಮಿ ಚಂದ್ರಪ್ಪ ಎಂಬುವರಿಗೆ ಸೇರಿದ ವಿನಾಯಕ ಎಮ್ಆರ್ಪಿ ಬಾರ್ ಅನ್ನು ನಿಯಮ ಮೀರಿ ಬೆಳ್ಳಂ ಬೆಳಗ್ಗೆ ತೆರೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬಾರ್ ಇದೆ. ದಿನನಿತ್ಯ ನಿಯಮ ಮೀರಿ ಬೆಳಗ್ಗೆ ಬಾರ್ ತೆರದು, ಮದ್ಯ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೇ ಎಮ್ಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಟಿವಿ9 ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ದಾಳಿ ಮಾಡಿದರು. ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಸಿಬ್ಬಂದಿ ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ. ಸಾವಿರಾರು ರೂಪಾಯಿ ಬೆಲೆಬಾಳುವ ಮದ್ಯದ ಬಾಕ್ಸ್ ಜಪ್ತಿ ಮಾಡಿದ್ದಾರೆ.