ಬೆಂಗಳೂರು: 18ನೇ ಲೋಕಸಭಾ ಚುನಾವಣಾ ಸಂಬಂಧವಾಗಿ ಸ್ಥಗಿತಗೊಂಡಿದ್ದ ಲೋಕಾಯುಕ್ತ ದಾಳಿಯನ್ನು ಸರ್ಕಾರಿ ನೌಕರರ ಅಧಿಕಾರಿ ಮತ್ತು ಸಿಬ್ಬಂದಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ರಾಜ್ಯದ ಸುಮಾರು 9 ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ.
ಕಲ್ಬುರ್ಗಿ, ಬೆಳಗಾಂ, ಧಾರವಾಡ, ಮಂಡ್ಯ, ಮೈಸೂರ್, ಹಾಸನ, ಕೋಲಾರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಎಸ್ಪಿ ಮಟ್ಟದ ಅಧಿಕಾರಿ ಸೇರಿದಂತೆ ನೂರಾರು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು 11ಪ್ರಕರಣಗಳಲ್ಲಿ 56 ಜಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದಾವಣಗೆರೆ ಎರಡು ಚಿತ್ರದುರ್ಗ 2 ಮತ್ತು ಉಳಿದಂತ ಏಳು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣದ ತನಿಖೆ ಮತ್ತು ತಪ್ಪಾಸಣೆ ನಡೆಸಿ ಚಿನ್ನ, ಬೆಳ್ಳಿ ಆಭರಣಗಳು, ಜಮೀನಿನ ಕಾಗದಪತ್ರಗಳು, ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.ಕಲ್ಬುರ್ಗಿಯ ಬಸವರಾಜ್ ಮಾಗಿ ಬಿಬಿಎಂಪಿ, ಮಂಡ್ಯ ಜಿಲ್ಲೆಯ ಶಿವರಾಜ್ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್, ಚಿತ್ರದುರ್ಗ ಜಿಲ್ಲೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ರವೀಂದ್ರ, ಧಾರವಾಡ ಜಿಲ್ಲೆಯ ಶೇಖರ ಗೌಡ ಪ್ರಾಜೆಕ್ಟ್ ಡೈರೆಕ್ಟರ್,ʼ
ಬೆಳಗಾಂ ಜಿಲ್ಲೆಯ ಮಹದೇವ್ ಬನ್ನೂರ್ ಅಸ್ಸಿಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆಯ ಉಮೇಶ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆಯ ಪ್ರಭಾಕರ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಕೋಲಾರದ ವಿಜ್ಜಣ್ಣ ತಹಸಿಲ್ದಾರ್, ಮೈಸೂರಿನ ಮಹೇಶ್ ಸೂಪರ್ಡೆಂಟ್ ಇಂಜಿನಿಯರ್ , ಹಾಸನದ ಜಗದೀಶ್ ಗ್ರೇಡ್ ಒನ್ ಸೆಕ್ರೆಟರಿ ಮತ್ತು ಚಿತ್ರದುರ್ಗದ ಜಗದೀಶ್ ಸೂಪರ್ಡೆಂಟ್ ಇಂಜಿನಿಯರ್ ಸೇರಿದಂತೆ ಇನ್ನೂ ಇತರೆ ಇಲಾಖೆಯ ಅಧಿಕಾರಿಗಳ ಮನೆಗಳ ತಪಾಸಣೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.