ಪಾವಗಡ: ತಾಲ್ಲೂಕಿನ ನಾರಾಯಣ ರೆಡ್ಡಿ ಹಾಗೂ ಕುಟುಂಬ ತಂಡದಿಂದ ಹಿರಿಯ ಪತ್ರಕರ್ತರರಾದ ರಾಮಾಂಜಿನಪ್ಪ ಮಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಪಾವಗಡ ತಾಲ್ಲೂಕುಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಲ್ಲಿ ಮಾರಕ ದಾಳಿ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣ ರೆಡ್ಡಿ ಎಂಬಾತನ ಅಕ್ರಮ ಸಂಬಂಧದ ಕುರಿತು ವರದಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಹೃದಯ ಭಾಗದ ಟೋಲ್ ಗೇಟ್ ಬಳಿ ನಾರಾಯಣ ರೆಡ್ಡಿ ಕುಟುಂಬದ ಮಹಿಳಾ ಸದಸ್ಯರು ಮೂರು ಜನ ಸೇರಿ ಪತ್ರಕರ್ತ ರಾಮಾಂಜಿನಪ್ಪನವರ ಮೇಲೆ ಅಂಬೇಡ್ಕರ್ ವೃತ್ತದಲ್ಲಿ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತ್ರಕರ್ತನ ಮೇಲಿನ ದಾಳಿ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಈ ಹಲ್ಲೆಗೆ ಪತ್ರಕರ್ತರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಏಇಖಂ ರಾಜ್ಯ ಹಾಗು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಘಟನೆ ಮಾಧ್ಯಮ ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ (ರಿ)ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷರಾದ ಜಿ ನಾಗರಾಜ್ ಹಾಗು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ್ ಹಾಗೂ ರಾಜ್ಯ ಕಾರ್ಯದರ್ಶಿಯಾದ ಸುಮಾ ಪುರುಷೋತ್ತಮ್ ರವರು ಪಾವಗಡ ಠಾಣೆ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಸುರೇಶ್ ರವರ ಬಳಿ ಘಟನೆ ಕುರಿತು ಚರ್ಚಿಸಲಾಗಿದ್ದು, ದಾಳಿ ಕೋರರ ಮೇಲೆ ಈIಖ ಕೂಡ ದಾಖಲಾಗಿರುತ್ತದೆ.
ಉನ್ನತ ಅಧಿಕಾರಿಗಳ (ಸೂಪರ್ ಡೆಂಟ್ ಆಫ್ ಪೊಲಿಸ್ ) ಗಮನಕ್ಕೆ ತರಲಾಗಿದೆ.ಇತ್ತೀಚಿನ ಬೆಳವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಘಟನೆ ಕುರಿತು ಪೊಲೀಸ್ ಠಾಣೆ ಮುಂದೆ ಜಮಯಿಸಿ ತಪ್ಪಿತಸ್ಥರು ವಿರುದ್ಧ ಕ್ರಮ ಕೈಗೊಂಡು ನ್ಯಾಯಾ ಕೊಡಿಸಲು ಪೊಲೀಸರನ್ನು ಒತ್ತಾಯಿಸಲಾಗಿದೆ.