ದೇವನಹಳ್ಳಿ : ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾ.ಪಂ. ವ್ಯಾಪ್ತಿಯ ಅಕ್ಲೆಮಲ್ಲೇನಹಳ್ಳಿ ಗ್ರಾಮದಸುಮಾರು 50 ಕುಟುಂಬಗಳ ಜನರನ್ನು ಎಂ.ಎಸ್. ರಾಮಯ್ಯನವರ ಕುಟುಂಬಸ್ಥರು ತಮ್ಮ ಹಣ-ಅಧಿಕಾರ ಬಳಸಿ ಮೂಲ ಹಳ್ಳಿಯಿಂದ ಒಕ್ಕಲೆಬ್ಬಿಸಿ ಬಂಡೆಬಳಿ ಮನೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದು, ನಾವು ಬಂಡೆ ಪಕ್ಕದಲ್ಲಿದ್ದ ಗೋಮಾಳದಲ್ಲಿ ಮನೆಗಳನ್ನು ಕಟ್ಟಿ ವಾಸ ಮಾಡುತ್ತಿದ್ದೇವೆ, ಎಂದು ಗ್ರಾಮದ ಮುಖಂಡ ತಿಮ್ಮರಾಯಪ್ಪ ತಿಳಿಸಿದರು.
ಅವರು ಅಕ್ಲೆಮಲ್ಲೇನಹಳ್ಳಿ ಗ್ರಾಮದ ಮೂಲ ಜಾಗದ ಬಳಿ ತಮಗಾದ ಅನ್ಯಾಯದ ಬಗ್ಗೆ ತಿಳಿಸಿ ಮಾತನಾಡಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿ ಸುತ್ತಲೂ ಇದ್ದ ಖರಾಬು ಜಾಗ ನುಂಗಲು ನಮ್ಮ ಗ್ರಾಮಕ್ಕೆ ನೀರು ಹರಿಸಿ ರಸ್ತೆ, ದೇವಾಲಯ ಸೇರಿದಂತೆ ಗ್ರಾಮದ ಕುರುಹುಗಳನ್ನು ನಾಶ ಮಾಡಿ ನಮ್ಮನ್ನು ಬಂಡೆಯ ಬಳಿ ಮನೆಗಳನ್ನು ನಿರ್ಮಿಸಿಕೊಳ್ಳಿ ಎಂದು ದರ್ಪದಿಂದ ನಮ್ಮನ್ನು ಒಕ್ಕಲೆಬ್ಬಿಸಿದರು ಎಂದು ತಿಳಿಸಿದರು.
ಎಸ್.ಟಿ ನಾಯಕ ಸಂಘದ ಮುಖಂಡ ನಾಗರಾಜು ಮಾತನಾಡಿ ಎಂ.ಆರ್.ಜಯರಾಮ್ ಶಾಸಕನಾದ ಮೇಲೆ ಉಳುಮೆ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ದೌರ್ಜನ್ಯ ನಡೆಸಿ 375 ಎಕರೆ ಗೋಮಾಳ ಜಾಗವಿದ್ದು ಅದನ್ನು ನುಂಗು ಸಂಚು ನಡೆಸಿ ನಾವು ಸಾಗುವಳಿ ಮಾಡಬೇಕೆಂದಿದ್ದ ಜಮೀನನ್ನು ಕಬಳಿಸಿದ್ದಲ್ಲದೆ, ನಾವು ವಾಸವಿದ್ದ ಮನೆಗಳಿಗೆ ನೀರು ಹಾಯಿಸಿ ಬೀಳುವಂತೆ ಮಾಡಿ ನಮ್ಮನ್ನು ಬಂಡೆಯ ಬಳಿ ಕಳುಹಿಸಿದರು, ನಂತರ ಇಲ್ಲಿದ್ದ ಬಾವಿ ಮುಚ್ಚಿಸಿ ಆಲದ ಮರಗಳನ್ನೆಲ್ಲಾ ಕಡಿಸಿ ನಮ್ಮ ಮೇಲೆ ಪೋಲೀಸ್ ಪ್ರಭಾವ ಬಳಿಸಿ ಬಂದಿಸಲು ಪ್ರಯತ್ನಿಸಿದರು,
ನಂತರ ನಾವು ಕೋರ್ಟ್ಗೆ ದಾವೆ ಹೂಡಿ ನಮ್ಮ ಪರವಾಗಿ ಕೋರ್ಟ್ ತೀರ್ಪು ಕೂಡ ನೀಡಿದೆ, ಇಲ್ಲಿ ಟಾಟ, ಬ್ರಿಗೇಡ್ ಕಂಪನಿಗಳಿಗೆ ಜಮೀನು ಪರಬಾರೆ ಮಾಡಲು ಬದಲಿ ನಿವೇಶನ ನೀಡಲು ಬಂದಿದ್ದಾರೆ, ಪಂಚಾಯ್ತಿಯಿಂದಲೂ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಪ್ರಯತ್ನಿಸಿದರು, ಆದರೂ ಗ್ರಾಮಸ್ಥರೆಲ್ಲಾ ಒಂದಾಗಿ ಯಾವುದೇ ಕಾರಣಕ್ಕೂ ಮೂಲ ನಿವಾಸಿಗಳಾದ ನಮ್ಮ ಜಮೀನನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರುಇದು ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಲಾಗಿದ್ದು ಇಂದು ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್, ಇಓ ಶ್ರೀನಾಥ್ಗೌಡ, ಪಿಡಿಓ ಗಂಗರಾಜು, ಭೂಮಾಪನ ಇಲಾಖೆ ಪೋಲಿಸ್ ಇಲಾಖೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ ಗ್ರಾಮಸ್ಥರು ತಮ್ಮ ನಿವೇದನೆ ಸಲ್ಲಿಸಿದ್ದಾರೆ ಹಾಗೂ ಸ್ಥಳ ಪರಿಶೀಲನೆ ಮಾಡಲಾಗಿದೆ ಗ್ರಾಮಸ್ಥರು ತಮ್ಮ ತೊಂದರೆಯನ್ನು ನಮಗೆ ತಿಳಿಸಿ ನಾವು ಅದನ್ನು ಕಾನೂನು ರಿತ್ಯ ಸರಿಪಡಿಸಲಾಗುವುದು, ಸರ್ವೇ ಮಾಡಿ ನಿಮ್ಮ ಗ್ರಾಮದ ಜಮೀನನ್ನು ಮರಳಿಸಲಾಗುವುದು ಎಂದರು.