ನೆಲಮಂಗಲ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಾಹಿತಿಗಳು ಹಾಗೂ ಸಾಮಾಜಿಕ ಚಿಂತಕರಾದ ಡಾ: ವೆಂಕಟೇಶ್ ಆರ್ ಚೌತಾಯಿ ತಿಳಿಸಿದರು.ನಗರದ ಪರಮಣ್ಣ ಲೇಔಟ್ನಲ್ಲಿ ಅಕ್ಷರ ಜ್ಞಾನ ಎಜುಕೇಶನ್ ಟ್ರಸ್ಟ್ (ರಿ) ಅಡ್ವೆಂಚರ್ ಕಿಡ್ಸ್ ಪ್ಲೇ ಹೋಂ ಮತ್ತು ಡೇಕೆರ್ ಹಾಗೂ ಅಡ್ವೆಂಚರ್ ಟ್ಯೂಟೋರಿಯಲ್ಸ್ ವತಿಯಿಂದ ಮೊದಲನೇ ವರ್ಷದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಪಾತ್ರ ಬಹಳ ಮುಖ್ಯ. ಬರೀ ಡಾಕ್ಟರ್, ಇಂಜಿನಿಯರ್, ಲಾಯರ್, ಆಗಬೇಕು ಎನ್ನುವ ಭರಾಟೆಯಲ್ಲಿ, ಮಕ್ಕಳಿಗೆ ತಂದೆ ತಾಯಿ ಬಂಧು ಬಳಗದ ಬಗ್ಗೆ ಗೌರವ ಭಾವನೆ ಕಡಿಮೆಯಾಗುತ್ತಿದೆ. ಹೆಚ್ಚಿನ ಶಿಕ್ಷಣ ಪಡೆದು ಹೆಚ್ಚು ಸಂಪಾದಿಸಬೇಕು ಎನ್ನುವ ಆಶೆಯಲ್ಲಿ, ಹೆತ್ತವರನ್ನು ತೊರೆದು, ಪಾಶ್ಚಾತ್ಯ ದೇಶಗಳಿಗೆ ಹೋಗಿ, ಆಮೇಲೆ ನಮ್ಮ ದೇಶವನ್ನು ಮರೆತು, ಹೆತ್ತ ತಾಯಿ, ತಂದೆ
ಯನ್ನು ವೃದ್ಧಾಶ್ರಮಕ್ಕೆ ಸೇರಿಸಿ, ಹೆತ್ತವರನ್ನು ದೂರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಕ್ಕಾಗಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದರು.ಶಾಲೆಯ ಅಧ್ಯಕ್ಷರಾದ ಶ್ರೀಮತಿ ಪಲ್ಲವಿಶಂಕರ್ ನಾರಾಯಣ ಮಾತನಾಡಿ ಶಿಕ್ಷಕರುಕೇವಲ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬಹುದುಅಕ್ಷರಗಳ ಪರಿಚಯ ಮಾಡಿಕೊಡಬಹುದು ಆದರೆ ಪೋಷಕರು ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಬೇಕು ಎನ್ನುವ ಭ್ರಮೆ ಬಿಟ್ಟು ಸಂಸ್ಕೃತಿ, ಸಂಸ್ಕಾರದ ಕಡೆಗೆ ಗಮನ ಕೊಟ್ಟು ಗುರು ಹಿರಿಯರ ಹಾಗೂ ಹೆತ್ತವರ ಬಗ್ಗೆ, ಸಂಬಂಧಗಳ ಬಗ್ಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಉತ್ತಮ ಸಂಸ್ಕಾರ ಬದುಕಿನಲ್ಲಿ ಉತ್ತಮ ಫಲವನ್ನು ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವೇಷಭೂಷಣಗಳೊಡನೆ ನೃತ್ಯ ಮಾಡಿ ಕುಣಿದು ಎಲ್ಲರನ್ನು ರಂಜಿಸಿದರು. ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಊಟ ವ್ಯವಸ್ಥೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷ ರಾದ ಪ್ರದೀಪ್ ಕುಮಾರ್, ಖಾಜಾಂಜಿಗಳಾದ ಶ್ರೀಮತಿ ತೇಜೋ ಲಕ್ಷ್ಮಮ್ಮ, ಅತಿಥಿಗಳಾಗಿ ಆಶಾ ಅನಿಲ್, ಪೂರ್ಣಿಮಾ ನವೀನ್ ಪ್ರೊಪ್ರೈಟರ್ ವೆಂಚರ್ ಡಯಾಗ್ನೋಸ್ಟಿಕ್, ಶ್ವೇತಾ ರಾಘವೇಂದ್ರ, ಹಾಗೂಪೋಷಕ ವೃಂದ ಮಕ್ಕಳು ಭಾಗವಹಿಸಿದ್ದರು.