ದೇವನಹಳ್ಳಿ: ಅಡುಗೆ ಮಾಡುವ ಸಮಯದಲ್ಲಿ ಪ್ರತಿಯೊಬ್ಬರೂ ಗ್ಯಾಸ್ ಸುರಕ್ಷತೆ ಬಗ್ಗೆ ಅರಿವಿರಲಿ ಎಂದು ಎಸ್ ಎಲ್ ಎನ್ ಎಸ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಶ್ರೇಯಸ್ ನಾಗೇಶ್ ಹೇಳಿದರು.ದೇವನಹಳ್ಳಿ ಪಟ್ಟಣದ ನಗ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಡುಗೆ ಅನಿಲ ಬಳಕೆ ಸುರಕ್ಷತೆ ಅರಿವು ಅಭಿಯಾನದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಗ್ಯಾಸ್ ಕಂಪನಿಗಳು ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಮಹಿಳೆಯರಿಗೆ ಗ್ಯಾಸ್ ಉಪಯೋಗಿಸುವ ರೀತಿ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು ಅಡುಗೆ ಅನಿಲ ಸೋರಿಕೆ ಆಗುವುದನ್ನು ಗಮನಿಸಬೇಕು ರೆಗ್ಯೆಯೋ ಲೇಟರ್ ಯಾವಾಗ ಬದಲಾವಣೆ ಮಾಡಬೇಕು. ಅಡುಗೆ ಮಾಡುವಾಗ ಯಾವ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ವಿವರವಾಗಿ ತಿಳಿಸುವ ಈ ಕಾರ್ಯಕ್ರಮ ಆಯೋಜಿಸಿ ಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನ ಅಧಿಕಾರಿ ಸಚಿನ್ ಮನೆ ಮಾತನಾಡಿ. ಭಾರತ್ ಗ್ಯಾಸ್ ಕಂಪನಿಗಳು ಇಲ್ಲಿನ ಮಹಿಳೆಯರಿಗೆ ಅಡುಗೆ ಮಾಡುವ ಸ್ಪರ್ಧೆ ಮತ್ತು ಮನೆಮನೆಗೆ ಅಡುಗೆ ಅನಿಲ ಸಿಲೆಂಡರ್ ತಲುಪಿಸುವ ಉತ್ತಮ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಹಿಳೆಯರಿಗೆ ಪ್ರಶಂಸ ನಾ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಅಡುಗೆ ಅನಿಲ ಬಳಕೆ ಇಂದು ಎಲ್ಲರಿಗೂ ಅನಿವಾರ್ಯ ಹಾಗೂ ತೀರ ಅಗತ್ಯವಾಗಿರುವಂತಹ ಪ್ರತಿ ಕುಟುಂಬಕ್ಕೂ ಗ್ಯಾಸ್ ಸಿಲಿಂಡರ್ ಎಷ್ಟು ಉಪಯೋಗವೂ ಅದೇ ರೀತಿ ಅದರ ಬಗ್ಗೆ ಸ್ವಲ್ಪ ಜವಾಬ್ದಾರಿ ವಹಿಸಿದರೆ ಅಷ್ಟೇ ಅಪಾಯಕಾರಿ, ಅದರ ಬಳಕೆ ಹಾಗೂ ತಪಾಸಣೆ ಬಗ್ಗೆ ಅಥವಾ ಅನಿಲ ಸೋರಿಕೆ ಮತ್ತು ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡು ತಜ್ಞರಿಗೆ ಅಥವಾ 1906 ಕರೆ ಮಾಡಿ ಮುಂದಾಗುವ ತೊಂದರೆಗಳನ್ನು ಸರಿಪಡಿಸಿಕೊಳ್ಳಿ ಎಂದರು.
ಅಡುಗೆ ಅನಿಲ ಸಂಪರ್ಕದ ಪೈಪನ್ನು ಕಡ್ಡಾಯವಾಗಿ 5 ವರ್ಷಕ್ಕೊಮ್ಮೆ ಗ್ಯಾಸ್ ಕಂಪನಿಯವರು ನೀಡುವ ಐ ಎಸ್ ಐ ನ ಗುಣಮಟ್ಟದ ಬದಲಿಸಿಕೊಳ್ಳಿ ಸೋರಿಕೆ ಸಮಸ್ಯ ಕಂಡು ಬಂದರೆ ತಕ್ಷಣ ಕರೆ ಮಾಡಿ ಸರಿಪಡಿಸಿಕೊಳ್ಳಿ ಅಡುಗೆ ಮಾಡಿದ ತಕ್ಷಣ ರಾತ್ರಿ ಮಲಗುವಾಗ ಸ್ಟವ್ ಮತ್ತು ಸಿಲಿಂಡರ್ ಗ್ಯಾಸ್ ಆಫ್ ಮಾಡಿ ಎಂದು ಹೇಳಿದರು. ಅಡುಗೆ ಮನೆಯಲ್ಲಿ ಗ್ಯಾಸ್ ಉಪಯೋಗಿಸುವಾಗ ಹಾಗೂ ಯಾವ ಮುಂಜಾಗ್ರತೆ ಕ್ರಮ ಅನುಸರಿಸಬೇಕು ಗ್ಯಾಸ್ ಲೀಕೇಜ್ ಕಾಣಿಸಿಕೊಂಡಾಗ ಏನೆಲ್ಲ ಕ್ರಮ ಅನುಸರಿಸಬೇಕು ಅನೇಕ ಮಾಹಿತಿಗಳನ್ನು ಎಲ್ಇಡಿ ಚಿತ್ರೀಕರಣದ ಮೂಲಕ ಗ್ರಾಹಕರಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ತಹಸಿಲ್ದಾರ್ ಪಿ. ಗಂಗಾಧರ್ ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಖಜಾಂಚಿ ಏಕೆಪಿ ನಾಗೇಶ್, ಸರಸ್ವತಿ ನಾಗೇಶ್, ಗ್ಯಾಸ್ ಏಜೆನ್ಸಿ ಮಾಲೀಕರಾದ ಜಯಲಕ್ಷ್ಮಿ, ಯಶ್ವಂತ್, ಮುನಿ ವೆಂಕಟಪ್ಪ, ಸುನಿತಾ, ಶ್ರೀಧರ್, ಹನುಮಂತಪ್ಪ, ಮತ್ತಿತರು ಇದ್ದರು.