ದೊಡ್ಡಬಳ್ಳಾಪುರ: ತಾಲೂಕಿನ ಅಣಬೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ರವಿ.ಆರ್.ಜಿ ಹಾಗೂ ಉಪಾಧ್ಯಕ್ಷರಾಗಿ ಬೈರೇಗೌಡ ಆಯ್ಕೆಯಾಗಿದ್ದಾರೆ.
ಈ ಸಮಯದಲ್ಲಿ ನಿರ್ದೇಶಕರಾದ ಎಚ್.ಎಸ್. ಕೆಂಪೇಗೌಡ,ಅಶೋಕ, ಜಿ.ಪಿ. ಮೂರ್ತಿ, ಕೀರ್ತಿಗೌಡ, ಸುಬ್ಬಣ್ಣ,ಚೈತ್ರ ರಾಜಣ್ಣ, ಗೌರಮ್ಮ, ಜಯಣ್ಣ ಹಾಜರಿದ್ದರು.ಆಯ್ಕೆಯಾದ ನೂತನ ಅದ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಅಭಿನಂದಿಸಿದ ಮಾಜಿ ಶಾಸಕರಾದ ಆರ್. ಜಿ ವೆಂಕಟಾಚಲಯ್ಯ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ,ದೊಡ್ಡಬಳ್ಳಾಪುರ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಗೋವಿಂದರಾಜು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಬೈರೇಗೌಡ, ಶಶಿ, ಹಣಬೆ ಮುನಿರಾಜು, ವಿಎಸ್ಎಸ್ಎನ್ ಅಧ್ಯಕ್ಷೆ ಲಕ್ಷ್ಮಿ ರಂಗನಾಥ್, ಕಾಂಗ್ರೆಸ್ ಮುಖಂಡರು,ಗ್ರಾಮ ಪಂಚಾಯತಿಯ ಕಾಂಗ್ರೆಸ್ ಸದಸ್ಯರು ಹಾಗೂ ಪ್ರಮುಖರು. ಹಾಜರಿದ್ದರು.