ನವದೆಹಲಿ: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ ರ್ಜಿಯನ್ನು ಸುಪ್ರೀಂಕರ್ಟ್ ಸೋಮವಾರ ವಜಾಗೊಳಿಸಿದೆ. ಲೈಂಗಿಕ ದರ್ಜನ್ಯ ಪ್ರಕರಣಗಳಲ್ಲಿ ತನಗೆ ಜಾಮೀನು ನೀಡಲು ನಿರಾಕರಿಸಿದ ರ್ನಾಟಕ ಹೈಕರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಇಂದು ಈ ರ್ಜಿಯ ವಿಚಾರಣೆ ನಡೆಸಿದ ನ್ಯಾಯಮರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ರ್ಮಾ ಅವರನ್ನೊಳಗೊಂಡ ಪೀಠ, ಹೈಕರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದು, ಪ್ರಜ್ವಲ್ ರೇವಣ್ಣ ಅವರ ರ್ಜಿಯನ್ನು ವಜಾಗೊಳಿಸಿತು. ಹೀಗಾಗಿ ಅವರಿಗೆ ಜೈಲೇ ಗತಿಯಾಗಿದೆ.
ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಆರೋಪಿ ಲೋಕಸಭಾ ಚುನಾವಣೆಗೆ ಸ್ರ್ಧಿಸಿದ್ದರು. ಹೀಗಾಗಿ ಅವರ ರ್ಚಸ್ಸಿಗೆ ಧಕ್ಕೆ ತರಲು ಅತ್ಯಾಚಾರದ ಆರೋಪ ಮಾಡಲಾಗಿದ್ದು, ಅವರಿಗೆ ಜಾಮೀನು ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದರು. ಆದರೆ ಆರೋಪಿ ಪ್ರಭಾವಿ ಎಂದು ಪರಗಣಿಸಿದ ಉನ್ನತ ನ್ಯಾಯಪೀಠ, ಜಾಮೀನು ರ್ಜಿಯನ್ನು ವಜಾಗೊಳಿಸಿತು.
ಆರು ತಿಂಗಳ ನಂತರ ಮತ್ತೆ ಜಾಮೀನು ರ್ಜಿ ಸಲ್ಲಿಸಬಹುದೇ ಎಂಬ ರೊಹ್ಟಗಿ ಮನವಿಗೆ ಏನನ್ನೂ ಹೇಳುವುದಿಲ್ಲ ಎಂದು ಸುಪ್ರೀಂಕರ್ಟ್ ಹೇಳಿತು. ಈ ಮೂಲಕ ಜಾಮೀನು ಸಿಗಬಹುದೆಂಬ ಪ್ರಜ್ವಲ್ ರೇವಣ್ಣ ನಿರೀಕ್ಷೆ ಹುಸಿಯಾಗಿದೆ.
ಹಲವು ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ಪ್ರಕರಣದಲ್ಲಿ ಇದೇ ರ್ಷ ಮೇ ತಿಂಗಳಲ್ಲಿ ಪ್ರಜ್ವಲ್ ರ್ಮನಿಯಿಂದ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿತ್ತು.
ಪ್ರಕರಣದಲ್ಲಿ ಪ್ರಜ್ವಲ್ ಅವರ ತಂದೆ ಹೆಚ್. ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ, ನಂತರ ಅವರಿಗೆ ಜಾಮೀನು ನೀಡಲಾಯಿತು ಮತ್ತು ದೂರಿನಲ್ಲಿ ಆರೋಪಿ ಎಂದು ಹೆಸರಿಸಲಾದ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಜಾಮೀನು ರ್ಜಿಯನ್ನು ಇದೀಗ ಸುಪ್ರೀಂಕರ್ಟ್ ವಜಾಮಾಡಿದ್ದು, ಮುಂದೆ ಅವರು ಜೈಲಿನಲ್ಲಿಯೇ ಇರಬೇಕಾಗುತ್ತದೆ.