ಬೆಂಗಳೂರು: ವಿಬ್ಗಯಾರ್ ಗ್ರೂಪ್ ಆಫ್ ಸ್ಕೂಲ್ಸ್ ಸಂಸ್ಥೆಯು ವಿಬ್ಗಯಾರ್ ಹೈ ಹರಳೂರು ಶಿಕ್ಷಣ ಸಂಸ್ಥೆಯಲ್ಲಿ ತನ್ನ ಹೊಸ ಏಸ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಮತ್ತು ಅತ್ಯಾಧುನಿಕ ಕ್ರೀಡಾ ಮೈದಾನವನ್ನು ಉದ್ಘಾಟಿಸಿದೆ.21ನೇ ಶತಮಾನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ಕೌಶಲ್ಯ ಮತ್ತು ಗುಣಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶಕ್ಕೆ ಪೂರಕವಾಗಿ ಈ ಎರಡು ಬೆಳವಣಿಗೆಗಳು ನಡೆದಿವೆ.
ವಿಬ್ಗಯಾರ್ ಏಸ್ ಕಾರ್ಯಕ್ರಮವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮಾಡುವುದರ ಜೊತೆಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿನ್ಯಾಸಗೊಳಿಸಲಾಗಿರುವ ನವೀನ ಶೈಕ್ಷಣಿಕ ಕಾರ್ಯಕ್ರಮವಾಗಿದೆ.ಕೇವಲ 30 ವಿದ್ಯಾರ್ಥಿಗಳ ಸಣ್ಣ ಬ್ಯಾಚ್ ಮೂಲಕ ಆರಂಭವಾಗಿರುವ ಈ ಕಾರ್ಯಕ್ರಮದಲ್ಲಿ ಪ್ರತೀ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಲಾಗುತ್ತಿದ್ದು, ಅತ್ಯುತ್ತ ಶಿಕ್ಷಣ ಪಡೆಯುವಂತೆ ನೋಡಿಕೊಳ್ಳಲಾಗುತ್ತದೆ.
ಏಸ್ ಕಾರ್ಯಕ್ರಮದಲ್ಲಿ ಪರಿಣಿತ ಮಾರ್ಗದರ್ಶನ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಅತ್ಯುತ್ತಮ ದರ್ಜೆಯ ಶಿಕ್ಷಕರನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ವೈಯಕ್ತಿಕ ಬೆಳವಣಿಗೆ ಸಾಧಿಸುವ ಜೊತೆಗೆ ಶೈಕ್ಷಣಿಕ ಸಾಧನೆ ಮಾಡುವಂತೆ ನೋಡಿಕೊಳ್ಳಲಾಗುತ್ತದೆ.ವಿಬ್ಗಯಾರ್ ಹೈ ಹರಳೂರು ಶಾಲೆಯ ಪ್ರಾಂಶುಪಾಲರಾದ ಜಾಸ್ಮಿನ್ ಕೆ.ಜೆ. ಅವರು, ಜೀವನದಲ್ಲಿ ಸರ್ವ ರೀತಿಯಲ್ಲೂ ಸನ್ನದ್ಧರಾಗಿರುವ ವಿದ್ಯಾರ್ಥಿಗಳನ್ನು ರೂಪಿಸುವ ವಿಬ್ಗಯಾರ್ ಸಂಸ್ಥೆಯ ಬದ್ಧತೆಗೆ ಈ ಹೊಸ ಏಸ್ ಕಾರ್ಯಕ್ರಮ ಮತ್ತು ಮೈದಾನ ಸಾಕ್ಷಿಯಾಗಿದೆ. ಏಸ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಮಾಡಲು ಅನುವು ಮಾಡಿಕೊಡಲಿದ್ದು, ಅತ್ಯಾಧುನಿಕ ಕ್ರೀಡಾ ಮೈದಾನವು ಶಿಸ್ತು, ದೃಢತೆ ಮತ್ತು ಟೀಮ್ ವರ್ಕ್ ಅನ್ನು ಕಲಿಸಕೊಡಲಿದೆ ಎಂದು ಹೇಳಿದರು.