ಚಂದಾಪುರ: ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹೆನ್ನಾಗರ ಗ್ರಾಮದ ದಿನ್ನೆಯಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವ ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.ಇದೇ ಶ್ರೀ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವಕ್ಕೆ ಗುಮ್ಮಳಾಪುರದ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮತ್ತು ಶ್ರೀ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿ ಲಿಂಗಸ್ವಾಮಿಗಳ ಟ್ರಸ್ಟ್ ನ ಪದಾದಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಭಕ್ತರು ಚಾಲನೆ ನೀಡಿ ದೇವಿಗೆ ಜಯಘೋಷಹಾಕಿದರು.
ಇದೇ ಸಂದರ್ಭದಲ್ಲಿ ಶ್ರೀ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವ ಅಂಗವಾಗಿ ಸ್ವಾಮಿಗೆ ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಹಾಗೆಯೇ ಅನ್ನದಾಸೋಹ. ಕೋಲಾಟ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಇದೇ ಸಂದರ್ಭದಲ್ಲಿ ಶ್ರೀ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿ ಲಿಂಗಸ್ವಾಮಿಗಳ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ರೆಡ್ಡಿ ಮತ್ತು ಹೊಸಹಳ್ಳಿ ಎಸ್.ಎನ್ಬಿ. ರಮೇಶ್ ರೆಡ್ಡಿರವರು ಮಾತನಾಡಿ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಯಲ್ಲಮ್ಮ ದೇವಿಯ ದೇವಾಲಯದ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು ಈ ನಿಟ್ಟಿನಲ್ಲಿ ಈ ಬಾರಿ ಶ್ರೀ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದು ಮುಂದಿನ ವರ್ಷದಲ್ಲಿ ಶ್ರೀ ಯಲ್ಲಮ್ಮ ದೇವಿಯ ಬ್ರಹ್ಮ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದರು.
ಇನ್ನು ಶ್ರೀ ಯಲ್ಲಮ್ಮ ದೇವಿಯ ದೇವಾಲಯದ ನೂತನ ಕಟ್ಟಡ ಈಗಾಗಲೇ ಶೇ60 ರಷ್ಠು ಕಾಮಗಾರಿಯು ಪೂರ್ಣ ಗೊಂಡಿದ್ದು ತಾಲ್ಲೂಕಿನ ಜನತೆ ಮತ್ತು ಭಕ್ತರು ತಮ್ಮ ಕೈಲಾದಷ್ಠು ಧನ ಸಹಾಯವನ್ನು ನೂತನ ದೇವಾಲಯದ ನಿರ್ಮಾಣಕ್ಕೆ ನೀಡುವ ಮೂಲಕ ದೇವಿಯ ಕೃಪೆಗೆ ಪಾತ್ರ ರಾಗಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ವಿಜಯ ರೆಡ್ಡಿ, ಬೆಳ್ಳಂಡೂರು, ಕೈಕೊಂಡನಹಳ್ಳಿ ವಂಶಸ್ಥರಿಂದ ಸಾವಿರಾರು ಭಕ್ತಾದಿಗಳಿಗೆ ರಾಗಿ ಮುದ್ದೆ ಅವರೆಕಾಳುಸಾರು ಊಟವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿ ಲಿಂಗಸ್ವಾಮಿಗಳ ಟ್ರಸ್ಟ್ನ ನಾಗೇಶ್. ವೆಂಕಟಸ್ವಾಮಿರೆಡ್ಡಿ, ಹಾರಗದ್ದೆ ವೆಂಕಟೇಶ್, ಹೆನ್ನಾಗರ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಸಮಾಜ ಸೇವಕರಾದ ಟವರ್ ನಾಗರಾಜು, ಬೆಳ್ಳಂಡೂರು ವಿಜಯ್ ಕುಮಾರ್. ಆರ್.ಕೆ.ಕೇಶವರೆಡ್ಡಿ. ಪ್ರಸನ್ನ ಕುಮಾರ್. ಮುನಿರತ್ನಮ್ಮ ಮುನಿರಾಜು. ಕಿರಣ್ ಕುಮಾರ್. ಹಾರಗದ್ದೆ ಅಕ್ಷಯ್ ಮತ್ತು ಶ್ರೀ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿ ಲಿಂಗಸ್ವಾಮಿಗಳ ಟ್ರಸ್ಟ್ ನ ಎಲ್ಲಾ ಪದಾದಿಕಾರಿಗಳು. ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಹೆನ್ನಾಗರ ಸುತ್ತ ಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು.