ಬೆಂಗಳೂರು: ಫ್ರೆಂಚ್ ಮೂಲದ ಬ್ರ್ಯಾಂಡ್ ಥಾಮ್ಸನ್ ಸೆ.27ರಿಂದ ಪ್ರಾರಂಭವಾಗಿದ್ದು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ನಲ್ಲಿ ತನ್ನ ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್ಗಳು ಮತ್ತು ಸ್ಪೀಕರ್ಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ಘೋಷಿಸಿದೆ.
ಈ ಸಂದರ್ಭದಲ್ಲಿ ಗ್ರಾಹಕರು ಥಾಮ್ಸನ್ ಆಂಡ್ರಾಯ್ಡ್ ಟಿವಿಗಳಲ್ಲಿ ಪ್ರತ್ಯೇಕವಾಗಿ ಸೋನಿ ಲೈವ್, ಜೀ5 ಮತ್ತು 27 ಇತರ ಓಟಿಟಿಗಳನ್ನು ನೋಡುವ 3 ತಿಂಗಳ ಓಟಿಟಿ ಪ್ಲೇ ಚಂದಾದಾರಿಕೆ ಪಡೆಯಲಿದ್ದಾರೆ.ರೂ. 5,999ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ಪನ್ನ ಒದಗಿಸುತ್ತಿರುವ ಥಾಮ್ಸನ್ ಪ್ರತೀ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ನೀಡಲಿದೆ. ಇದೇ ಸಂದರ್ಭದಲ್ಲಿ ಥಾಮ್ಸನ್ ರೂ. 12,999 ಬೆಲೆಯಲ್ಲಿ ಆಕರ್ಷಕವಾದ ಮರೂನ್ ಬಣ್ಣದ ಟಾಪ್ ಲೋಡ್ ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ.
ಥಾಮ್ಸನ್ ಇತ್ತೀಚೆಗಷ್ಟೇ ಆಲ್ಫಾಬೀಟ್ 25 ಮತ್ತು ಆಲ್ಫಾಬೀಟ್ 60 ಎಂಬ ಎರಡು ಪ್ರಮುಖ ಸೌಂಡ್ ಬಾರ್ ಗಳನ್ನು ಬಿಡುಗಡೆ ಮಾಡಿತ್ತು. ಥಾಮ್ಸನ್ ಮುಂದಿನ ಆರು ತಿಂಗಳಲ್ಲಿ 20 ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಎರಡು ಹೊಸ ಸೌಂಡ್ ಬಾರ್ಗಳು ಕ್ರಮವಾಗಿ ರೂ.1499 ಮತ್ತು ರೂ. 3599ರ ವಿಶೇಷ ಬೆಲೆಯಲ್ಲಿ ದೊರೆಯಲಿದೆ.
ಬ್ಯಾಂಕ್ ಆಫರ್ಗಳನ್ನು ಸಹ ಪಡೆಯಬಹುದು.ಈ ಕುರಿತು ಭಾರತದಲ್ಲಿ ಥಾಮ್ಸನ್ ನ ವಿಶೇಷ ಬ್ರಾಂಡ್ ಪರವಾನಗಿದಾರರಾದ ಎಸ್ ಪಿ ಪಿ ಎಲ್ ನ ಸಿಇಓ ಶ್ರೀ ಅವ್ನೀತ್ ಸಿಂಗ್ ಮರ್ವಾಹ್, ಈ ಹಬ್ಬದ ಋತುವಿನಲ್ಲಿ 2 ಲಕ್ಷಕ್ಕೂ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಅದಕ್ಕಾಗಿ ಪ್ರೇಕ್ಷಕರಿಗೆ ಅತ್ಯುತ್ತಮ ಆಫರ್ ಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.