ಬೆಳಗಾವಿ: ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಅನುದಾನಕ್ಕಾಗಿ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದಲ್ಲಿ ವರದಿಯಾದದ್ದು ಸತ್ಯಕ್ಕೆ ದೂರವಾದದ್ದು ಎಂದು ಸರ್ಕಾರದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಕ್ಷೇತ್ರವಾರು ಅನುದಾನ, ಅಭಿವೃದ್ಧಿಗೆ ಹೆಚ್ಚು ಹಣ ಕೊಡಬೇಕು, ಹೊಸ ಹಾಗೂತುರ್ತು ಕಾಮಗಾರಿಗೆ 4 ಸಾವಿರ ಕೋಟಿ ರೂ ಕೊಡಬೇಕು ಚರ್ಚೆಯಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಮಳೆ ಬಂದು ಹಳ್ಳಿಗಾಡಿನಲ್ಲಿ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಹಣ ಬಿಡುಗಡೆ ಮಾಡಲು ಸಿಎಂ ಭರವಸೆ ಕೊಟ್ಟಿದ್ದಾರೆ. ಗ್ಯಾರಂಟಿ ಮೂಲಕ ಹಣ ಕೊಡುತ್ತಿರೋದು ಹೆಚ್ಚಿನ ಸಹಾಯ ಆಗಿದೆ.
ನನ್ನ ಕ್ಷೇತ್ರ ಒಂದಕ್ಕೆ 330 ಕೋಟಿ ರೂ ಗ್ಯಾರಂಟಿ ಹಣ ಬಂದಿದೆ. ಇಷ್ಟು ನೇರವಾಗಿ ಹಣ ಕೊಡುವ ಕೆಲಸ ಹಿಂದೆ ಆಗಿಲ್ಲ. ಆದರೆ ಅಷ್ಟು ಪ್ರಚಾರ ಸಿಕ್ತಿಲ್ಲ. ಗ್ಯಾರಂಟಿ ಕೊಟ್ಟಿದ್ದೆ ತಪ್ಪು, ಬಿಟ್ಟಿ ಭಾಗ್ಯ ಕೆಲವರು ಹೇಳುತ್ತಾರೆ ಅಷ್ಟೇ ಎಂದ ಜಯಚಂದ್ರ ತಿಳಿಸಿದ್ದಾರೆ.