ಅನುಷ್ಕಾ ಶೆಟ್ಟಿ, ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ, ಯೂವಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಫಸ್ಟ್ ಫ್ರೇಮ್ ಎಂಟರ್ಟೇನ್ಮೆಂಟಿನ ಪ್ಯಾನ್ ಇಂಡಿಯಾ ಸಿನಿಮಾ ‘ಘಾಟಿ’ಯ ಗಮನಸೆಳೆಯಿವ ಫಸ್ಟ್ ಲುಕ್ ಅನಾವರಣಗೊಂಡಿದೆ.
ಕ್ವೀನ್ ಅನುಷ್ಕಾ ಶೆಟ್ಟಿಯವರು ಮತ್ತೆ ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ ಅವರೊಂದಿಗೆ ‘ಘಾಟಿ’ ಎಂಬಅ ಹೊಸ ಚಿತ್ರಕ್ಕೆ ಕೈಜೋಡಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸಿದ್ದಾರೆ. ಬ್ಲಾಕ್ ಬಸ್ಟರ್ ‘ವೇದಂ’ ಯಶಸ್ಸಿನ ನಂತರ ಇದು ಅನುಷ್ಕಾ ಮತ್ತು ಕ್ರಿಷ್ ಅವರ ಎರಡನೇ ಚಿತ್ರವಾಗಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ ನಾಲ್ಕನೇ ಸಿನಿಮಾ ಎನ್ನುವುದು ವಿಶೇಷ.
ಅನುಷ್ಕಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡವು ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ್ದು ರಕ್ತದೋಕುಳಿಯಲ್ಲಿ ಮಿಂದಿರುವ ಅನುಷ್ಕಾ ಅವರು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಪೋಸ್ಟರ್ನಲ್ಲಿ ಅವರ ಕಠೋರ ಮುಖಭಾವ, ಹಣೆಯ ಬೊಟ್ಟು ಮತ್ತು ಭಂಗಿ ಸೇದುತ್ತಿರುವ ದೃಶ್ಯ ಅನುಷ್ಕಾ ಅವರ ಪಾತ್ರದ ಗಾಢತೆಯನ್ನು ಬಿಂಬಿಸುತ್ತಿದೆ. ನೀರು ತುಂಬಿದ ಕಣ್ಣುಗಳು ಮತ್ತು ಮೂಗಿನ ಎರಡು ಬದಿಗೆ ಹಾಕಿರುವ ನತ್ತು ಅವರ ಪಾತ್ರದ ತೀವ್ರತೆಯನ್ನು ಮತ್ತಷ್ಟು ಗಾಢವಾಗಿಸಿದೆ, ಮತ್ತು ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.