ಬೆಂಗಳೂರು: ನಾದಸ್ವರ ನುಡಿಸುವ ಬಾಬು(32) ಎಂಬಾತನು ತನ್ನ ಹೆಂಡತಿಯ ಅನೈತಿಕ ಸಂಬಂಧದ ಹಿಂದೆ ಆಗಾಗ್ಗೆ ಗಲಾಟೆ, ಜಗಳ ನಡೆಯುತ್ತಿದ್ದು, ಮೊನ್ನೆ ರಾತ್ರಿ ಗಲಾಟೆ ಜಾಸ್ತಿಯಾಗಿ ದೊಣ್ಣೆಯಿಂದ ಬಾಬು ತನ್ನ ಹೆಂಡತಿ ಅನಿತಾಗೆ ಹೊಡೆದಿದ್ದನು.
ಈ ಘಟನೆಯು ಅತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಮಾರನಹಳ್ಳಿಯಲ್ಲಿ ಜರುಗಿತ್ತು. ಮೃತ ಅನಿತಾ ಮತ್ತು ಆರೋಪಿ ಬಾಬುರವರಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ.ಆರೋಪಿ ಬಾಬು ದೊಣ್ಣೆಯಲ್ಲಿ ತಲೆಗೆ ಹೊಡೆದಿದ್ದ ಪರಿಣಾಮ ನಿನ್ನೆ ರಾತ್ರಿ ಅನಿತಾ ಮೃತಪಟ್ಟಿರುತ್ತಾರೆ ಎಂದು ಅತ್ತಿಬೆಲೆ ಇನ್ಸ್ಪೆಕ್ಟರ್ ರಾಘವೇಂದ್ರರವರು ತಿಳಿಸಿದರು.ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಕೊಲೆ ಮುಖದೊಮ್ಮೆ ದಾಖಲಿಸಿ ಕೊಂಡು ಆರೋಪಿ ಬಾಬುವನ್ನು ವಶಕ್ಕೆ ಪಡೆದು ತನಿಖೆ ನಡೆಸಿರುತ್ತಾರೆ.