ಬೆಂಗಳೂರು: ಒಂದು ವರ್ಷದ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣ ವ್ಯಾಪ್ತಿಯ ಪಟ್ಟೆಗಾರ ಪಾಳ್ಯದ ಮುಖ್ಯ ರಸ್ತೆಯಲ್ಲಿ ಕ್ರೇನ್ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿ 7 ವಾಹನಗಳಿಗೆ ಡಿಕ್ಕಿ ಹೊಡೆದು ನಾಲ್ಕು ಜನ ಗಾಯಗೊಂಡು ಒಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿತ್ತು.
ಚಂಗಲರಾಯಶೆಟ್ಟಿ ಎಂಬುವವರು ಮೃತಪಟು ನಾಲ್ವರಿಗೆ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದರು. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿ ಕ್ರೇನ್ ಚಾಲಕ ನಾಗಯ್ಯನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರು.ನ್ಯಾಯಾಲಯ ಕ್ರೇನ್ ಚಾಲಕ ನಾಗಯ್ಯನನ್ನು ದೋಷಿ ಎಂದು ಪರಿಗಣಿಸಿ ರೂ.7,500 ಜುಲ್ಮನೆ ವಿಧಿಸಿ ಒಂದು ವರ್ಷ ಕಾರಾಗೃಹವಾಸ ಅನುಭವಿಸಲು ಆದೇಶ ಹೊರಡಿಸಿರುತ್ತಾರೆ.
ದ್ವಿಚಕ್ರ ಸವಾರನೊಬ್ಬನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡ್ರಳ್ಳಿ ಬೆಸ್ಕಾಂ ಕಚೇರಿ ಮುಂದೆ ಹೆಲ್ಮೆಟ್ ಧರಿಸದೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಮತ್ತೊಂದು ಬೈಕ್ನಲ್ಲಿ ಹಿಂಬದಿ ಸವಾರಣಿಯಾಗಿ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಣಿಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಜುಲೈ 15, 2024ರಂದು ಈ ಅಪಘಾತ ಸಂಭವಿಸಿತು. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿ ನಾಗೇಶ್ ವಿರುದ್ಧ ಜೆಎಂಎಫ್ಸಿ ಸಂಚಾರ ಎರಡು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದರು.ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿ ನಾಗೇಶನಿಗೆ ದೋಷಿ ಎಂದು ಪರಿಗಣಿಸಿ 29 ಸಾವಿರ ರೂಪಾಯಿ ಜೂಲ್ಮನೆ ವಿಧಿಸಿ ಆದೇಶ ಹೊರಡಿಸಿರುತ್ತಾರೆ.