ಬಂಗಾರಪೇಟೆ: ಪ್ರಸ್ತುತ ದಿನಗಳಲ್ಲಿ ಕಳ್ಳತನ ಮತ್ತು ಆನ್ ಲೈನ್ ವಂಚಕರ ಉಪಟಳ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮೋಸದ ಬಲೆಗೆ ಬೀಳಬಾರದು ಹಾಗೂ ಅಪರಾದ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬಂಗಾರಪೇಟೆ ಎ.ಎಸ್.ಐ. ಮಂಜುನಾಥ್ ರವರ ನೇತೃತ್ವದಲ್ಲಿ ಜನಜಾಗೃತಿ ಆಂದೋಲನ ಏರ್ಪಡಿಸಲಾಗಿತ್ತು.
ಪಟ್ಟಣದ ಅಂಬೇಡ್ಕರ್ ಭವನದ ಸಮೀಪ ಬಂಗಾರಪೇಟೆ ಪೊಲೀಸ್ ಠಾಣಾ ವತಿಯಿಂದ ” ಮನೆ ಮನೆಗೆ ಪೊಲೀಸ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಕರಪತ್ರ ವಿತರಣೆ ಮಾಡಲಾಯಿತು.ಮಹಿಳೆಯರು ಅನವಶ್ಯಕ ವಾಗಿ ಆಭರಣ ಧರಿಸುವುದನ್ನು ತಪ್ಪಿಸ ಬೇಕು. ನಿಮ್ಮನ್ನು ವಿಳಾಸ ಕೇಳುವ, ಕುಡಿಯಲು ನೀರು ಕೇಳುವ ನೆಪದಲ್ಲಿ ಬರುವ ಕಳ್ಳರು ಕ್ಷರ್ಣಾರ್ಧದಲ್ಲಿ ನಿಮ್ಮ ಕತ್ತಿನ ಸರವನ್ನು ಎಗರಿಸಿ ಪರಾರಿ ಆಗುತ್ತಾರೆ. ಇದರಿಂದ ಎಚ್ಚರವಹಿಸಿರಬೇಕು,
ಹಾಗೂ ಮನೆ ಬಿಟ್ಟು ಹೋಗುವಾಗ ಮದುವೆ, ಪ್ರವಾಸ ದೇವಸ್ಥಾನ, ಇನ್ನಿತರೇ ಕಾರ್ ಕ್ರಮಗಳಿಗೆ ಹೋಗುವಾಗ ಚಿನ್ನಾಭರಣಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್ ಲಾಕರ್ನಲ್ಲಿ ಇಡತಕ್ಕದ್ದು ಎಂದರು. ಮನೆ ಕೆಲಸಗಾರರನ್ನು ಇಟ್ಟುಕೊಂಡಲ್ಲಿ ಅವರ ಪೂರ್ವಾಪರಗಳಬಗ್ಗೆ ತಿಳಿದುಕೊಂಡಿರಬೇಕು. ಅವರ ಆಧಾರ್ ಕಾರ್ಡ್ ಮತ್ತು ಇನ್ನಿತರೆ ದಾಖಲೆ ಪಡೆದುಕೊಳ್ಳಬೇಕು ಎಂದರು. ಅಪರಾಧ ತಡೆಗೆ ಪೊಲೀಸ್ ಪಡೆ ಬದ್ಧ: ಸಾರ್ವಜನಿಕ ಆಸ್ತಿ-ಪಾಸ್ತಿ-ಪ್ರಾಣ ರಕ್ಷಣೆ ಗಾಗಿ, ಅಪರಾಧ ಪತ್ತೆ ಮತ್ತು ತಡೆಯು ವಿಕೆಗಾಗಿ ಪೊಲೀಸ್ ಪಡೆ ಸದಾ ಬದ್ಧವಾ ಗಿದೆ. ಅಪರಾಧ ಒಂದು ಸಾಮಾಜಿಕ ಪಿಡುಗು. ಅದನ್ನು ತೊಲಗಿಸಲು ಇರುವ ಏಕೈಕ ಮಂತ್ರ ಎಂದರೆ ಜಾಗೃತಿ ಮಾಡಿಸು ವುದಾಗಿದೆ. ಈ ನಿಟ್ಟಿನಲ್ಲಿ ನಿಮ್ಮದಲ್ಲದ ವಸ್ತುಗಳಿಗೆ ಎಂದಿಗೂ ಆಸೆ ಪಡಬಾರದು.ಈ ಸಂದರ್ಭದಲ್ಲಿ ಎಸ್.ಬಿ. ಮಂಜುನಾಥ್ ಎಚ್ ಸಿ.ಹಾಗೂ ಸಿಬ್ಬಂದಿ ಸೋಮಪ್ಪ ಉಪಸ್ಥಿತರಿದ್ದರು.