ಬೆಂಗಳೂರು: ನಿನ್ನೆ ರಾತ್ರಿ ನಿಧನರಾದ ಚಿತ್ರನಟಿ ಹಾಗೂ ಖ್ಯಾತ ನಿರೂಪಕಿ ಅಪರ್ಣ ಅವರ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ಶಿವರಾಜ್ ತಂಗಡಗಿ,
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವರಾದ ಕೆ. ಗೋಪಾಲಯ್ಯ ಸೇರಿದಂತೆ ನಾಡಿನ ಅನೇಕ ಗಣ್ಯರು ಚಿತ್ರರಂಗದ ಪ್ರಮುಖರು ಅಪರ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಅವರ ಕನ್ನಡದ ಸಿರಿಕಂಠದ ಬಗ್ಗೆ ಸ್ಪಷ್ಟ ಉಚ್ಛಾರಣೆ ಸೇರಿದಂತೆ ಅವರು ನಡೆಸಿಕೊಟ್ಟ ಕಾರ್ಯಕ್ರಮಗಳ ಮೆಲುಕು ಹಾಕಿದ್ದಾರೆ.