ಬೆಂಗಳೂರು: ಚಿಕ್ಕಜಾಲ ಮತ್ತು ಅಮೃತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಚಿಕ್ಕಬಳ್ಳಾಪುರದ ಅಲಿಪುರದಿಂದ ದನದ ಮಾಂಸವನ್ನು ಕೊಂಡೊಯ್ಯುತ್ತಿದ್ದ ಎರಡು ಕಾರ್ ಗಳನ್ನು ಪೊಲೀಸರು ತಡೆಹಿಡಿದು ಸುಮಾರು ರೂ.1400 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡಿರುತ್ತಾರೆ.
ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 400 ಕೆ.ಜಿ ದನದ ಮಾಂಸವನ್ನು ಕೊಂಡೊಯ್ಯುತ್ತಿದ್ದ ಚಾಲಕ ಕಾರು ಬಿಟ್ಟು ಪರಾರಿಯಾಗಿರುತ್ತಾನೆ ಮತ್ತು ಅಮೃತಳ್ಳಿ ಪೊಲೀಸ್ ಠಾಣಾ ಹೆಬ್ಬಾಳ ಮೇಲ್ ಸೇತುವೆ ಮೇಲೆ ಸಾವರ್ ಖಾನ್ ಎಂಬ ಚಾಲಕನನ್ನು ಬಂಧಿಸಿ ಕಾರಿನಲ್ಲಿದ್ದ ಒಂದು ಸಾವಿರ ಕೆಜಿ ದನದ ಮಾಂಸವನ್ನು ವಶಪಡಿಸಿ ಕೊಂಡಿರುತ್ತಾರೆ.
ಬೈಜಾನ್ ಎಂಬ ಎನ್ಜಿಓ ಜೊತೆಗೂಡಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಮಾಂಸವನ್ನು ವಶಪಡಿಸಿಕೊಂಡಿರುತ್ತಾರೆ ಎಂದು ಈಶಾನ್ಯ ವಲಯ ಡಿಸಿಪಿ ತಿಳಿಸಿರುತ್ತಾರೆ.