ಒಬ್ಬ ಟ್ರಾವಿಸ್ ಹೆಡ್ ಅನ್ನು ಔಟ್ ಮಾಡುವ ತಂತ್ರ ಏನೆಂದು ತಲೆಕೆಡಿಸಿಕೊಂಡಿರುವ ಸಮಯದಲ್ಲೇ ಆಸ್ಚ್ರೇಲಿಯಾ ತಂಡದಲ್ಲಿ ಮತ್ತೊಬ್ಬ ಯುವ ಬ್ಯಾಟರ್ ಭಾರತದ ಬೌಲರ್ ಗಳನ್ನು ತಬ್ಬಿಬ್ಬುಗೊಳಿಸಿದ್ದಾನೆ. ಆಸೀಸ್ ಪರ ಪದಾರ್ಪಣೆ ಪಂದ್ಯ ಆಡುತ್ತಿರುವ ಸ್ಯಾಮ್ ಕೋನ್ಸ್ಟಾಸ್ ಎಂಬ 19ರ ಹರೆಯದ ಯುವಕ ಅರ್ಧಶತಕ ಹೊಡೆದು ಮಿಂಚಿದ್ದಾನೆ.
ಕಳೆದ 3 ಪಂದ್ಯಗಳಲ್ಲಿ ಭಾರತೀಯ ಬೌಲರ್ ಗಳ ಎಸೆತಗಳನ್ನು ಅಂದಾಜಿಸಿ ಆಡಲು ವಿಫಲರಾಗಿದ್ದ ಮೆಕ್ ಸ್ವೀನಿಯನ್ನು 4ನೇ ಪಂದ್ಯಕ್ಕೆ ಕಿತ್ತು ಹಾಕಿ ಏಕಾಏಕಿ ಸ್ಯಾಮ್ ಕಾನ್ಸ್ಟಾಸ್ ಎಂಬ 19ರ ಹರೆಯದ ಯುವಕನನ್ನು ಆಸ್ಟ್ರೇಲಿಯಾ ತಂಡ ಮೆಲ್ಬರ್ನ್ ನಲ್ಲಿ ಕಣಕ್ಕಿಳಿಸಿದಾಗಲೇ ಭಾರತ ತಂಡ ಕಣಕ್ಕಿಳಿಸಿದಾಗಲೇ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು.
ಆಸ್ಟ್ರೇಲಿಯಾ ಪರ ಆಡುತ್ತಿರುವ ನಾಲ್ಕನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಡುಗ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ತನ್ನಿಚ್ಛೆಯಂತೆ ಆಡುತ್ತಾನೆ ಎಂದು ಮೊದಲೇ ಹೇಳಲಾಗುತ್ತಿತ್ತು.